ADVERTISEMENT

ವಿದ್ಯಾರ್ಥಿವೇತನ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:30 IST
Last Updated 29 ಅಕ್ಟೋಬರ್ 2019, 19:30 IST

ವರ್ಗ: ಅಂತರರಾಷ್ಟ್ರೀಯ ಮಟ್ಟ

ವಿದ್ಯಾರ್ಥಿ ವೇತನ: ಕಾಮನ್‌ವೆಲ್ತ್‌ ವಿದ್ಯಾರ್ಥಿ ವೇತನ– 2020, ಯು.ಕೆ

ವಿವರ: ಯು.ಕೆಯ ಕಾಮನ್‌ವೆಲ್ತ್‌ ಸ್ಕಾಲರ್‌ಶಿಪ್‌ ಕಮಿಷನ್‌ (ಸಿಎಸ್‌ಸಿ) ಮತ್ತು ಮಾನವ ಸಂಪನ್ಮೂಲ ಸಚಿವಾಲಯ (ಎಂಎಚ್‌ಆರ್‌ಡಿ) ಈ ವಿದ್ಯಾರ್ಥಿ ವೇತನ ನೀಡಲಿವೆ. ಯು.ಕೆಯ ವಿಶ್ವವಿದ್ಯಾಲಯಗಳಲ್ಲಿ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಆರ್ಥಿಕ ನೆರವು ದೊರೆಯಲಿದೆ. ಯು.ಕೆಯಲ್ಲಿ ಉನ್ನತ ಶಿಕ್ಷಣ ಮಾಡಲು ಒಪ್ಪಿಗೆ ದೊರೆತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ADVERTISEMENT

ಅರ್ಹತೆ: 2020ರ ಅಕ್ಟೋಬರ್‌ನೊಳಗೆ ಪದವಿ ಪೂರೈಸುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆ ವಿದ್ಯಾರ್ಥಿಯು 2020ರ ಸೆಪ್ಟೆಂಬರ್‌/ಅಕ್ಟೋಬರ್‌ನಲ್ಲಿ ಯು.ಕೆಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಳಿಸಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪೂರ್ಣ ಬೋಧನಾ ಶುಲ್ಕ, ವಿಮಾನ ಪ್ರಯಾಣ ಶುಲ್ಕ ಸೇರಿದಂತೆ ಅಧ್ಯಯನಕ್ಕೆ ಕೈಗೊಳ್ಳುವ ಸಾರಿಗೆ ವೆಚ್ಚವನ್ನು ಈ ವಿದ್ಯಾರ್ಥಿ ವೇತನ ಭರಿಸಲಿದೆ. ಅಲ್ಲದೆ ತಿಂಗಳಿಗೆ 1,362 ಪೌಂಡ್‌ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ನವೆಂಬರ್‌ 15

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/Praja/CMS2

***

ವರ್ಗ: ಮೆರಿಟ್‌ ಆಧಾರಿತ

ವಿದ್ಯಾರ್ಥಿ ವೇತನ: ಖೊರಾನಾ ವಿದ್ಯಾರ್ಥಿವೇತನ–2020

ವಿವರ: ಭಾರತ–ಅಮೆರಿಕ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ (ಐಯುಎಸ್‌ಎಸ್‌ಟಿಎಫ್‌) ಹಾಗೂ ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಈ ವಿದ್ಯಾರ್ಥಿ ವೇತನವನ್ನು ಭಾರತೀಯ ವಿದ್ಯಾರ್ಥಿಗಳಿಗೆ ನೀಡುತ್ತದೆ. ಜೈವಿಕ ತಂತ್ರಜ್ಞಾನ ಮತ್ತು ಪೂರಕ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಅಮೆರಿಕದ ಮ್ಯಾಡಿಸನ್‌ನಲ್ಲಿರುವ ವಿಸ್‌ಕಾನ್ಸಿನ್‌ ವಿಶ್ವವಿದ್ಯಾಲಯ ಮತ್ತು ಅದರ ಪಾಲುದಾರ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಚಟುವಟಿಕೆ ಕೈಗೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ.

ಅರ್ಹತೆ: ಅಂತಿಮ ವರ್ಷದ ಬಿ.ಟೆಕ್‌ ವಿದ್ಯಾರ್ಥಿಗಳು, ಎಂ.ಟೆಕ್‌, ಬಿ.ಎಸ್‌ಸಿ, ಎಂ.ಎಸ್‌ಸಿ, ಬಿ.ಇ, ಎಂ.ಇ, ಎಂ.ಎಸ್‌, ಸಂಯೋಜಿತ ಬಿ.ಎಸ್‌, ಎಂ.ಎಸ್‌, ಬಿ.ವಿ.ಎಸ್‌ಸಿ, ಎಂ.ವಿ.ಎಸ್‌ಸಿ, ಬಿ.ಫಾರ್ಮ, ಎಂ.ಫಾರ್ಮ, ಎಂ.ಬಿ.ಬಿ.ಎಸ್‌ ಪದವೀಧರರು ಹಾಗೂ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ (ಎಂ.ಎಂ.ಎಸ್‌.ಟಿ) ಕೋರ್ಸ್‌ಗಳ ಪದವೀಧರರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಸಿಜಿಪಿಎ 8.0 ಅಥವಾ ಅದಕ್ಕಿಂತ ಹೆಚ್ಚಿರಬೇಕು ಅಥವಾ ಶೇ 80ರಷ್ಟು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ವಿಮಾನ ಪ್ರಯಾಣ ಶುಲ್ಕ ಹಾಗೂ ಆರೋಗ್ಯ ವಿಮೆ ದೊರೆಯಲಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನ: 2019ರ ಅಕ್ಟೋಬರ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/Praja/KPF7

***

ವರ್ಗ: ಮೆರಿಟ್‌ ಆಧಾರಿತ

ವಿದ್ಯಾರ್ಥಿ ವೇತನ: ‘ಆಸಿಯಾನ್‌’ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ಸಚಿವಾಲಯ (ಎಂಎಚ್‌ಆರ್‌ಡಿ) ಪಿಎಚ್‌.ಡಿ ವಿದ್ಯಾರ್ಥಿವೇತನ-2019

ವಿವರ: ಆಸಿಯಾನ್‌ ದೇಶಗಳ ವಿದ್ಯಾರ್ಥಿಗಳಿಗೆ ಸಂಶೋಧನೆ ಕೈಗೊಳ್ಳಲು ಮಾನವ ಸಂಪನ್ಮೂಲ ಸಚಿವಾಲಯ ಅವಕಾಶ ಕಲ್ಪಿಸುವ ಸಲುವಾಗಿ ಈ ವಿದ್ಯಾರ್ಥಿವೇತನ ನೀಡುತ್ತದೆ. ದೇಶದ ಯಾವುದೇ ಐಐಟಿಗಳಲ್ಲಿ ಪಿಎಚ್‌.ಡಿ ಪದವಿ ಪಡೆಯಲು ಅಗತ್ಯ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಇದು ಹೊಂದಿದೆ.

ಅರ್ಹತೆ: ಆಸಿಯಾನ್‌ ದೇಶಗಳಲ್ಲಿನ ಸ್ನಾತಕೋತ್ತರ ಪದವೀಧರರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಮೊದಲ ಎರಡು ವರ್ಷ ತಿಂಗಳಿಗೆ ₹ 31 ಸಾವಿರ, ನಂತರದ ಮೂರು ವರ್ಷ ತಿಂಗಳಿಗೆ ₹ 35 ಸಾವಿರ, ಸಂಶೋಧನಾ ವೆಚ್ಚವಾಗಿ ₹ 1.70 ಲಕ್ಷದವರೆಗೆ ಹಾಗೂ ವಸತಿ ಭತ್ಯೆ (ತಿಂಗಳ ಆರ್ಥಿಕ ನೆರವಿನ ಶೇ 24) ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಅಕ್ಟೋಬರ್‌ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/Praja/MAG1

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.