ವಿದ್ಯಾರ್ಥಿ ವೇತನ: ವೈದ್ಯಕೀಯ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಗ್ರಿಫಿತ್ ವಿಶ್ವವಿದ್ಯಾಲಯ ನೀಡುವ ವಿದ್ಯಾರ್ಥಿ ವೇತನ
ವಿವರ: ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯವು ತನ್ನಲ್ಲಿ ವೈದ್ಯಕೀಯ ವಿಜ್ಞಾನ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಭರಿಸುವಷ್ಟು ಆರ್ಥಿಕ ನೆರವು ದೊರೆಯಲಿದೆ.
ಅರ್ಹತೆ: ಗ್ರಿಫಿತ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿಜ್ಞಾನ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕಕ್ಕೆಂದು 10,000 ಅಮೆರಿಕನ್ ಡಾಲರ್‌ನಷ್ಟು ಆರ್ಥಿಕ ನೆರವು ದೊರೆಯುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ನವೆಂಬರ್ 29
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಮಾಹಿತಿಗೆ: http://www.b4s.in/praja/GUB1
***
ವಿದ್ಯಾರ್ಥಿ ವೇತನ: ಜಸ್ಟಸ್ ಅಂಡ್ ಲೂಯಿಸ್ ವ್ಯಾನ್ ಎಫೆನ್ ಎಕ್ಸೆಲೆನ್ಸ್ ಸ್ಕಾಲರ್‌ಶಿಪ್ 2019
ವಿವರ: ನೆದರ್ಲೆಂಡ್‌ನ ಡೆಲ್ಫ್ಟ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ಸಿ. ಕೋರ್ಸ್‌ಗೆ ಪ್ರವೇಶ ಪಡೆಯುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ದೊರೆಯಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಬೋಧನಾ ಶುಲ್ಕ ಮತ್ತು ಜೀವನ ವೆಚ್ಚ ಭರಿಸುವಷ್ಟು ಆರ್ಥಿಕ ನೆರವು ದೊರೆಯಲಿದೆ.
ಅರ್ಹತೆ: ಪದವಿ ಕೋರ್ಸ್‌ಗಳಲ್ಲಿ ಶೇ 80ಕ್ಕಿಂತ ಹೆಚ್ಚು ಸರಾಸರಿ ಗ್ರೇಡ್ ಪಾಯಿಂಟ್ (ಜಿಪಿಎ) ಹೊಂದಿ, ಡೆಲ್ಫ್ಟ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ಸಿ. ಕೋರ್ಸ್ ಪ್ರವೇಶಕ್ಕೆ ಅನುಮತಿ ದೊರೆತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ಜೀವನ ವೆಚ್ಚ ಹಾಗೂ ಇತರ ವೆಚ್ಚಗಳನ್ನು ಭರಿಸಲು ಪೂರಕವಾಗಿ ವಾರ್ಷಿಕ 30,000 ಯುರೊ ಆರ್ಥಿಕ ನೆರವು ದೊರೆಯಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಡಿಸೆಂಬರ್ 1
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಮಾಹಿತಿ: http://www.b4s.in/praja/EES1
***
ವಿದ್ಯಾರ್ಥಿ ವೇತನ: ಐರ್ಲೆಂಡ್ ಸರ್ಕಾರದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್– 2020
ವಿವರ: ಐರ್ಲೆಂಡ್‌ನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪೋಸ್ಟ್ ಡಾಕ್ಟರಲ್ ವ್ಯಾಸಂಗ ಮಾಡಬಯಸುವ ಅಭ್ಯರ್ಥಿಗಳಿಗೆ ಐರಿಷ್ ಸಂಶೋಧನಾ ಪರಿಷತ್ ಈ ವಿದ್ಯಾರ್ಥಿ ವೇತನ ಸ್ಥಾಪಿಸಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಆರ್ಥಿಕ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಅರ್ಹತೆ: ಪಿಎಚ್.ಡಿ. ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾರ್ಷಿಕ 31,275 ಯುರೊ, ಪಿಆರ್‌ಎಸ್‌ಐ– ವಾರ್ಷಿಕ 3,425 ಯುರೊ, ಪಿಂಚಣಿ – ವಾರ್ಷಿಕ 6,255 ಯುರೊ ಮತ್ತು ಸಂಶೋಧನಾ ವೆಚ್ಚವಾಗಿ ವಾರ್ಷಿಕ 5,000 ಯುರೊ ನೀಡಲಾಗುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ನವೆಂಬರ್ 27
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಮಾಹಿತಿ: http://www.b4s.in/praja/GOI7
***
ಕೃಪೆ: buddy4study.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.