ವಿದ್ಯಾರ್ಥಿ ವೇತನ
ಪದವಿ ವಿದ್ಯಾರ್ಥಿಗಳಿಗೆ
ಕ್ಯಾಡೆನ್ಸ್ ಸ್ಕಾಲರ್‌ಷಿಪ್ ಯೋಜನೆಯು ಪದವಿ ಮತ್ತು ವೃತ್ತಿಪರ ಕೋರ್ಸ್ ತೆಗೆದುಕೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತದೆ.
ಅರ್ಹತೆ: ಭಾರತೀಯ ಪ್ರಜೆಯಾಗಿರಬೇಕು. 12ನೇ ತರಗತಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕಡಿಮೆ ಆದಾಯ ಹೊಂದಿರಬೇಕು. ಎಸ್‌ಟಿಯಿಎಂ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ಅಂಗವಿಕಲ ವಿದ್ಯಾರ್ಥಿಗಳು, ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಆದ್ಯತೆ.
ಆರ್ಥಿಕ ನೆರವು:ಪ್ರಮುಖ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಆರ್ಥಿಕ ನೆರವು.
ಅರ್ಜಿ ಸಲ್ಲಿಸಲು ಕೊನೆ ದಿನ: 31-05-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/TCSP5
ಕಿರಾಣಿ ಅಂಗಡಿ ಮಾಲೀಕರ ಮಕ್ಕಳಿಗೆ
ಕಿರಾಣಿ ಅಂಗಡಿ ಮಾಲೀಕರ ಮಕ್ಕಳಿಗೆ
ಉತ್ತಮ ಭವಿಷ್ಯವನ್ನು ನಿರ್ಮಿಸಲು ಫ್ಲಿಪ್‌ಕಾರ್ಟ್ ಫೌಂಡೇಷನ್ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವೃತ್ತಿಪರ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಪದವಿ ಕೋರ್ಸ್‌ಗಳಿಗೆ ದಾಖಲಾಗಿರುವ ಕಿರಾಣಿ ಅಂಗಡಿ ಮಾಲೀಕರ ಮಕ್ಕಳ ಸಬಲೀಕರಣಕ್ಕಾಗಿ ಈ ವಿದ್ಯಾರ್ಥಿವೇತನವು ಮೀಸಲಾಗಿದೆ.
ಅರ್ಹತೆ: ಅಭ್ಯರ್ಥಿಗಳು ಪ್ರಸ್ತುತ ಭಾರತದಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ವೃತ್ತಿಪರ ಪದವಿ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಕೋರ್ಸ್‌ಗಳ 1ನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರಬೇಕು. ಹೆತ್ತವರಲ್ಲಿ ಒಬ್ಬರು ಕಿರಾಣಿ ಅಂಗಡಿಯ ಮಾಲೀಕರಾಗಿರಬೇಕು (ಕೆಎಸ್ಒ). ಅಭ್ಯರ್ಥಿಗಳು ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಸೇರಿ
₹5 ಲಕ್ಷವನ್ನು ಮೀರಬಾರದು.
ಆರ್ಥಿಕ ಸಹಾಯ: ₹50,000 ನಿಗದಿತ ವಿದ್ಯಾರ್ಥಿವೇತನ.
ಅರ್ಜಿ ಸಲ್ಲಿಸಲು ಕೊನೆ ದಿನ: 01-05-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/pjvi/FLIP1
ಬರ್ಮಿಂಗ್ಹ್ಯಾಮ್ ಸ್ಕಾಲರ್‌ಷಿಪ್
ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯ ನೀಡುವ ಸ್ಕಾಲರ್‌ಷಿಪ್ ಇದಾಗಿದೆ.
ಅರ್ಹತೆ: ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ದಾಖಲಾಗಲು ಅವಕಾಶ ಪಡೆದ ಭಾರತೀಯ ವಿದ್ಯಾರ್ಥಿಗಳು.
ಆರ್ಥಿಕ ನೆರವು: ಬೋಧನಾ ಶುಲ್ಕವಾಗಿ £6,000 (ಸರಿಸುಮಾರು ₹6,50,772) ಅರ್ಜಿ ಸಲ್ಲಿಸಲು ಕೊನೆಯ ದಿನ: 31-05-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/UCBD1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.