ಅರ್ಥಪೂರ್ಣ ಸಾಮಾಜಿಕ ಪ್ರಭಾವ ಬೀರಬಲ್ಲ, ಹೊಸತನದಿಂದ ಕೂಡಿದ, ಸುಸ್ಥಿರ ಪರಿಹಾರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಆಸಕ್ತರಿಂದ ಶೆಫ್ಲರ್ ಇಂಡಿಯಾ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಭಾರತದ ನಿವಾಸಿಗಳಾಗಿರಬೇಕು. 1 ಜುಲೈ 2025ರ ಹೊತ್ತಿಗೆ 18ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಆರಂಭಿಕ ಹಂತದ ಸ್ಟಾರ್ಟ್-ಅಪ್‌ಗಳು ಅಥವಾ ಅನುಷ್ಠಾನಕ್ಕೆ ಸಿದ್ಧವಾಗಿದ್ದು, ಕಾರ್ಯಾಚರಣಾ ಮೂಲಮಾದರಿಯನ್ನು ಹೊಂದಿರುವ ಆರಂಭಿಕ ಹಂತದ ಸ್ಟಾರ್ಟ್–ಅಪ್‌ಗಳಿಗೆ ಅಥವಾ ಸ್ವಯಂಸೇವಾ ಸಂಸ್ಥೆಗಳಿಗೆ ಈ ಫೆಲೋಷಿಪ್ ಅನ್ವಯವಾಗುತ್ತದೆ.
ಐಐಎಂಎ ವೆಂಚರ್ಸ್, ಐಐಎಂ ಅಹಮದಾಬಾದ್‌ನಲ್ಲಿ ವಿಶೇಷ ಮಾರ್ಗದರ್ಶನ, ಉತ್ತೇಜಕ ಫೆಲೋಷಿಪ್ ಅನುದಾನದ ನೆರವು ಹಾಗೂ ವಿಸ್ತೃತ ನೆಟ್‌ವರ್ಕಿಂಗ್ (ಸಂಪರ್ಕ) ಅವಕಾಶಗಳನ್ನು ಇದು ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15.9.2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಹೆಚ್ಚಿನ ಮಾಹಿತಿಗೆ: Short Url: www.b4s.in/praja/SIA4
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಸ್ಟೆಮ್) ವಿಭಾಗಗಳಲ್ಲಿ ಪದವಿ ಪಡೆಯಲು ಬಯಸುವ ಮಹಿಳಾ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶವನ್ನು ಈ ಸ್ಕಾಲರ್‌ಷಿಪ್ ಹೊಂದಿದೆ.
ಅರ್ಜಿದಾರರು ಭಾರತದ ವಿದ್ಯಾರ್ಥಿನಿಯಾಗಿರಬೇಕು. 12ನೇ ತರಗತಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರಬೇಕು. ಎನ್‌ಐಆರ್‌ಎಫ್ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪದವಿಯ ಮೊದಲ ವರ್ಷಕ್ಕೆ ದಾಖಲಾದವರು ಅರ್ಜಿ ಸಲ್ಲಿಸಬಹುದು. ಜೊತೆಗೆ, ಎರಡನೇ ವರ್ಷದ ಬಿ.ಆರ್ಕ್ ವಿದ್ಯಾರ್ಥಿಗಳು ಮತ್ತು ಐದು ವರ್ಷಗಳ ಇಂಟಿಗ್ರೇಟೆಡ್ ಅಥವಾ ಅವಳಿ ಪದವಿ ಕೋರ್ಸ್‌ಗಳನ್ನು ಪಡೆಯುತ್ತಿರುವವರು ಸಹ ಅರ್ಜಿ ಸಲ್ಲಿಸಬಹುದು.
ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಪಟ್ಟಿಗೆ ಸೇರಿರದ ಸರ್ಕಾರಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್ ಪಡೆಯಲು ಉದ್ದೇಶಿಸಿರುವ ಹೆಣ್ಣುಮಕ್ಕಳು ಸಹ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 8 ಲಕ್ಷ ಮೀರಿರಬಾರದು.
ಆರ್ಥಿಕ ಸಹಾಯ: ಆಯ್ಕೆಯಾದ ಅಭ್ಯರ್ಥಿಗಳು ವಾರ್ಷಿಕ ₹ 1 ಲಕ್ಷದವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15.9.2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಮಾಹಿತಿಗೆ: Short Url: www.b4s.in/praja/ISTS3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.