ADVERTISEMENT

ವಿದ್ಯಾರ್ಥಿ ವೇತನ-ಲದುಮಾ ದಮೆಚಾ ಯುವ ಸ್ಕಾಲರ್‌ಷಿಪ್‌ ಪ್ರೊಗ್ರಾಂ– 2022

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 19:45 IST
Last Updated 11 ಡಿಸೆಂಬರ್ 2022, 19:45 IST
   

ಆರ್ಥಿಕ ದುರ್ಬಲ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಕೋರ್ಸ್‌ಗೆ ಸೇರಲು ಅನುಕೂಲ ಕಲ್ಪಿಸುವುದಕ್ಕಾಗಿ ಲಿ ಲದುಮಾ ದಮೆಚಾ ಯುವ ಸ್ಕಾಲರ್‌ಷಿಪ್‌ ಯೋಜನೆ ರೂಪಿಸಲಾಗಿದೆ.

ಬೆಂಗಳೂರು, ಅಹಮದಾಬಾದ್, ಮುಂಬೈ ಹಾಗೂ ದೆಹಲಿ ಎನ್‌ಸಿಆರ್‌ ರಾಜ್ಯಗಳ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿದಾರ ವಿದ್ಯಾರ್ಥಿಗಳು 10 ಅಥವಾ 12ನೇ ತರಗತಿ(ಪಿಯುಸಿ)ಯನ್ನು ಶೇ 85ರಷ್ಟು ಅಂಕಗಳೊಂದಿಗೆ ಪೂರ್ಣ ಗೊಳಿಸಿರಬೇಕು. ಜೊತೆಗೆ ಜೆಇಇ/ಎನ್‌ಇಇಟಿ ಕೋಚಿಂಗ್ ಪಡೆದಿರಬೇಕು. ಈ ಎಲ್ಲ ಅರ್ಹತೆಗಳನ್ನು ಪೂರೈಸುವ ಮೊದಲ ವರ್ಷದ ಎಂಜಿನಿಯ ರಿಂಗ್ / ವೈದ್ಯಕೀಯ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹3 ಲಕ್ಷಕ್ಕಿಂತ ಹೆಚ್ಚಿರಬಾರದು.

ಆರ್ಥಿಕ ನೆರವು: ಪ್ರತಿ ವರ್ಷ ₹50ಸಾವಿರ

ADVERTISEMENT

ಅರ್ಜಿ ಸಲ್ಲಿಕೆಗೆ ಕೊನೆ ದಿನ: 15-12-2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/YUUS1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.