ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ರಾಮನ್ ಕಾಂತ್ ಮುಂಜಾಲ್ ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 0:30 IST
Last Updated 30 ಜೂನ್ 2025, 0:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

(ಸಾಂದರ್ಭಿಕ ಚಿತ್ರ)

ರಾಮನ್ ಕಾಂತ್ ಮುಂಜಾಲ್ ಸ್ಕಾಲರ್‌ಷಿಪ್‌ 

ADVERTISEMENT

ರಾಮನ್ ಕಾಂತ್ ಮುಂಜಾಲ್ ಫೌಂಡೇಷನ್‌ನ ಒಂದು ಉಪಕ್ರಮವಾಗಿದ್ದು,‘ ಹೀರೋ ಫಿನ್‌ಕಾರ್ಪ್’ ಸಹಯೋಗದೊಂದಿಗೆ ನಡೆಸಲಾಗುತ್ತದೆ. 

ಅರ್ಹತೆ: ಹಣಕಾಸು ಸಂಬಂಧಿತ ಕೋರ್ಸ್‌ಗಳನ್ನು ಮಾಡುತ್ತಿರುವ  ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಅವಕಾಶ ಇದಾಗಿದೆ. ಬಿಬಿಎ, ಬಿಎಫ್‌ಐಎ, ಬಿ.ಕಾಂ. (ಎಚ್, ಇ), ಬಿಎಂಎಸ್, ಐಪಿಎಂ, ಬಿ.ಎ. (ಅರ್ಥಶಾಸ್ತ್ರ), ಬಿಬಿಎಸ್  ಅಥವಾ ಇತರೆ ಹಣಕಾಸು ಸಂಬಂಧಿತ ಪದವಿ ಕೋರ್ಸ್‌ಗಳಿಗೆ ದಾಖಲಾಗಿರಬೇಕು. ಅರ್ಜಿದಾರರು 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ ಶೇ 80ರಷ್ಟು ಅಂಕಗಳನ್ನು ಪಡೆದಿರಬೇಕು. (ಪಿಡಬ್ಲ್ಯೂಡಿ ವಿದ್ಯಾರ್ಥಿಗಳಿಗೆ ಶೇ 70ರಷ್ಟು ಅಂಕಗಳು)
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ INR ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಭಾರತೀಯ ಪ್ರಜೆಗಳಿಗೆ ಮಾತ್ರ ಮುಕ್ತವಾಗಿದೆ.
 

ಆರ್ಥಿಕ ಸಹಾಯ: ಮೂರು ವರ್ಷಗಳವರೆಗೆ ವರ್ಷಕ್ಕೆ ₹40 ಸಾವಿರದಿಂದ ಐದುವರೆಲಕ್ಷ.

ಅರ್ಜಿ ಸಲ್ಲಿಸಲು ಕೊನೆ ದಿನ: 31-07-2025
ಅರ್ಜಿ ಸಲ್ಲಿಸುವ ವಿಧಾನ:ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/RMKSP5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.