ಬೆಂಗಳೂರು: ಇಲ್ಲಿನ ಚನ್ನಸಂದ್ರದ ಎಸ್.ಎಲ್.ಎಸ್.ಇಂಟರ್ ನ್ಯಾಷನಲ್ ಗುರುಕುಲ ಶಾಲೆಯಲ್ಲಿ ‘ಕನ್ನಡ ಮಾತನಾಡಿದರೆ ದಂಡ’ ವಿಧಿಸುವುದಾಗಿ ಸುತ್ತೋಲೆ ಹೊರಡಿಸಿರುವುದು ವಿವಾದಕ್ಕೆ ಎಡೆಮಾಡಿದೆ.
‘ಒಂದು ಬಾರಿ ಮಾತನಾಡಿದರೆ ₹ 50 ದಂಡ, ಎರಡನೇ ಬಾರಿ ಮಾತನಾಡಿದರೆ ₹ 100 ದಂಡ’ ಎಂದು ವಿದ್ಯಾರ್ಥಿಗಳ ಪೋಷಕರಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಮಾಹಿತಿ ತಿಳಿದ ತಕ್ಷಣ ಸೋಮವಾರ ಶಾಲೆಗೆ ತೆರಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು, ಶಾಲೆಯ ವರ್ತನೆ ವಿರುದ್ಧ ಹರಿಹಾಯ್ದರು. ಶಾಲೆಯ ವೆಬ್‌ಸೈಟ್, ಕನ್ನಡ ಭಾಷಾ ಕಲಿಕಾ ವಿಧಾನಗಳನ್ನು ಪರಿಶೀಲಿಸಿ,ವಿವಿಧ ವಿಷಯಗಳ ಬೋಧನೆ ಮಾಡುವ ಶಿಕ್ಷಕರನ್ನು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನು ನಿಯಮ ಉಲ್ಲಂಘಿಸಿ ನೇಮಕ ಮಾಡಿಕೊಂಡಿರುವುದಕ್ಕೆ ತರಾಟೆಗೆ ತೆಗೆದುಕೊಂಡರು.
ಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದನ್ನು ಮತ್ತು ಅನರ್ಹ ಶಿಕ್ಷಕರ ನೇಮಕಾತಿಯ ಬಗ್ಗೆ ಅಧ್ಯಕ್ಷರ ಮುಂದೆ ಆಡಳಿತ ಮಂಡಳಿ, ತಪ್ಪೊಪ್ಪಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.