ADVERTISEMENT

National Scholarship | ಬೃಹತ್‌ ವಿದ್ಯಾರ್ಥಿವೇತನಕ್ಕೆ ರಾಷ್ಟ್ರಮಟ್ಟದ ಪರೀಕ್ಷೆ‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   

ಅಸೋಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್‌ (ಎಎಂಪಿ) ಸಂಸ್ಥೆಯು ಬೃಹತ್‌ ವಿದ್ಯಾರ್ಥಿ
ವೇತನ ಯೋಜನೆ ರೂಪಿಸಿದೆ. ಅದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಪ್ರತಿಭಾ ಶೋಧ ಪರೀಕ್ಷೆ ನಡೆಸಲಿದೆ. ಸಾಮಾನ್ಯ ಜ್ಞಾನ, ನೀಟ್‌, ಐಐಟಿ–ಜೆಇಇ ಮತ್ತು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ (ಸಿಎಲ್‌ಎಟಿ) ವಿದ್ಯಾರ್ಥಿಗಳ ಸಿದ್ಧತೆಯನ್ನು ಗುರಿಯಾಗಿಟ್ಟು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ನಗದು ಬಹುಮಾನ ಹಾಗೂ ಇತರ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಲು ಸಹ ಈ ಪರೀಕ್ಷೆಯು ಅವಕಾಶ ಮಾಡಿಕೊಡುತ್ತದೆ.

ಮೂರು ವಿಭಾಗಗಳಲ್ಲಿ ಪರೀಕ್ಷೆ ನಡೆಯುತ್ತದೆ

ADVERTISEMENT

1.ಶಾಲೆಗಳು (8, 9 ಮತ್ತು 10ನೇ ತರಗತಿ)

2.→ಜೂನಿಯರ್‌/ ಇಂಟರ್‌ಮೀಡಿಯಟ್‌ ಕಾಲೇಜುಗಳು (11 ಮತ್ತು 12ನೇ ತರಗತಿ)

3.→ಪದವಿ ಕಾಲೇಜುಗಳು.

ಏನೆಲ್ಲಾ ಸೌಲಭ್ಯ ಸಿಗಲಿದೆ?

l→500ಕ್ಕೂ ಹೆಚ್ಚು ಪ್ರತಿಭಾಶಾಲಿಗಳಿಗೆ ಐಐಟಿ–ಜೆಇಇ, ನೀಟ್‌ ತರಬೇತಿಗೆ ಶೇ 100ರಷ್ಟು ವಿದ್ಯಾರ್ಥಿವೇತನ

l→ಉನ್ನತ ಅಂಕ ಗಳಿಸಿದ ಎಲ್ಲ ವಿಭಾಗದ
ವಿದ್ಯಾರ್ಥಿಗಳಿಗೂ ನಗದು ಬಹುಮಾನ

l→ಅರ್ಹ 500 ಮಂದಿಗೆ ವಾರ್ಷಿಕ
ವಿದ್ಯಾರ್ಥಿವೇತನ

l→ಎಲ್ಲ ವಿದ್ಯಾರ್ಥಿಗಳಿಗೂ ಇ–ಪ್ರಮಾಣಪತ್ರ
ನೀಡಿಕೆ

ಪರೀಕ್ಷೆಯ ದಿನಾಂಕ: ಶನಿವಾರ, ಡಿಸೆಂಬರ್ 13 
ನೋಂದಣಿಗೆ ಕೊನೇ ದಿನ: ನವೆಂಬರ್ 25

ಆಸಕ್ತ ವಿದ್ಯಾರ್ಥಿಗಳು ಶುಲ್ಕರಹಿತ ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌

ಸಂಪರ್ಕಿಸಬಹುದು https://www.ampindia.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.