ADVERTISEMENT

ದ್ವಿತೀಯ ಪಿಯುಸಿ ಪರೀಕ್ಷಾ ಮಾರ್ಗದರ್ಶಿ: ನ್ಯೂಕ್ಲಿಯಸ್‌ಗಳು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 19:30 IST
Last Updated 17 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೈಜಿಕ ಬಲ:

ನ್ಯೂಕ್ಲಿಯಸ್‌ನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ (ನ್ಯೂಕ್ಲಿಯಾನು) ಗಳನ್ನು ಬಂಧಿಸಿರುವ ಆಕರ್ಷಣೀಯ ಬಲವನ್ನು ಬೈಜಿಕ ಬಲ ಎನ್ನುವರು.

ಬೈಜಿಕ ಬಲದ ವೈಶಿಷ್ಟ್ಯಗಳು:

ADVERTISEMENT

ರಾಶಿಗಳ ನಡುವಿನ ಗುರುತ್ವಾಕರ್ಷಣ ಬಲ ಅಥವಾ ವಿದ್ಯುದಾವೇಶಗಳ ನಡುವೆ ವರ್ತಿಸುವ ಕೊಲಂಬ್ ವಿಕರ್ಷಕ ಬಲಗಳಿಗಿಂತ 1000 ಪಟ್ಟು ಶಕ್ತಿಯುತವಾಗಿದೆ.

ಬೈಜಿಕ ಬಲವು ಹತ್ತಿರ ವ್ಯಾಪ್ತಿಯ ಬಲವಾಗಿದ್ದು, ಎರಡು ನ್ಯೂಕ್ಲಿಯಾನುಗಳ ನಡುವಿನ ಅಂತರ 2 ಫರ್ಮಿ ಇದ್ದಾಗ ಮಾತ್ರ ಪ್ರಶಂಸನೀಯವಾಗಿದ್ದು, ಅಂತರ 4 ಫರ್ಮಿ ಅಥವಾ ಹೆಚ್ಚಾದಾಗ ಬೈಜಿಕ ಬಲವು ಶೂನ್ಯವಾಗುತ್ತಾ ಹೋಗುತ್ತದೆ.

ಬೈಜಿಕ ಬಲವು ವಿದ್ಯುದಾವೇಶದ ಮೇಲೆ ಸ್ವತಂತ್ರವಾಗಿದ್ದು, ನ್ಯೂಟ್ರಾನ್-ನ್ಯೂಟ್ರಾನ್, ಪ್ರೋಟಾನ್-ಪ್ರೋಟಾನ್ ಮತ್ತು ಪ್ರೋಟಾನ್-ನ್ಯೂಟ್ರಾನ್ ನಡುವಿನ ಬೈಜಿಕ ಬಲವು ಅಂದಾಜು ಒಂದೇ ಆಗಿರುತ್ತದೆ.

ಬೈಜಿಕ ಬಲವು ನ್ಯೂಕ್ಲಿಯಾನುಗಳ ಭ್ರಮಣೆಯ ಮೇಲೆ ಅವಲಂಬಿತವಾಗಿದ್ದು, ಸಮಾಂತರ ಭ್ರಮಣೆಯಿದ್ದಾಗ ಪ್ರಬಲವಾಗಿಯೂ ಸಮಾಂತರವಿಲ್ಲದಿದ್ದಾಗ ದುರ್ಬಲವಾಗಿಯೂ ವರ್ತಿಸುತ್ತದೆ.

ಬೈಜಿಕ ಬಲಗಳು ವಿಕರ್ಷಣ ಮೂಲವನ್ನು ಹೊಂದಿದ್ದು, ಅವುಗಳ ನಡುವಿನ ದೂರ 2 ಫರ್ಮಿಗಿಂತ ಕಡಿಮೆಯಾದಾಗ ಬೈಜಿಕ ಬಲವು ವಿಕರ್ಷಿತವಾಗುತ್ತದೆ

ಬೈಜಿಕ ಬಲವು ಪರಿಪೂರ್ಣತೆಯ ಬಲವಾಗಿದ್ದು, ತನ್ನ ಸುತ್ತಲಿನ ನಿರ್ದಿಷ್ಟ ಸಂಖ್ಯೆಯ ನ್ಯೂಕ್ಲಿಯಾನುಗಳ ಮೇಲೆ ಮಾತ್ರ ವರ್ತಿಸುತ್ತದೆ.

ವಿಕಿರಣ ಪಟುತ್ವ:

ಎ,ಎಚ್,ಬೆಕ್ವೆರಲ್ ವಿಕಿರಣಪಟುತ್ವವನ್ನು ಸಂಯುಕ್ತ ವಸ್ತುಗಳ ಮೇಲೆ ದೃಗ್ಗೋಚರ ಬೆಳಕು ಬಿದ್ದಾಗ ಉಂಟಾಗುವ ಪ್ರತಿದೀಪ್ತಿ ಮತ್ತು ಅನುದೀಪ್ತಿಗಳಗಳನ್ನು ಅಭ್ಯಸಿಸುವಾಗ ಕಂಡುಹಿಡಿದರು.

ಸಂಯುಕ್ತ ವಸ್ತುವು ಕಪ್ಪುಹಾಳೆ ಮತ್ತು ಬೆಳ್ಳಿಯ ಮೂಲಕ ತೂರಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ವಿಕಿರಣ ಪಟುತ್ವವು ಒಂದು ಬೈಜಿಕ ಪ್ರಕ್ರಿಯೆಯಾಗಿದ್ದು ಅಸ್ಥಿರ ನ್ಯೂಕ್ಲಿಯಸ್ ಕ್ಷಯಿಸುತ್ತಾ ಹೋಗುತ್ತದೆ. ನಿಸರ್ಗದಲ್ಲಿ ಮೂರು ರೀತಿಯ ವಿಕಿರಣಪಟು ಕ್ಷಯಿಕೆಗಳಿವೆ.

-ಕ್ಷಯಿಕೆ
-ಕ್ಷಯಿಕೆ
-ಕ್ಷಯಿಕೆ

1) ಆಲ್ಫಾ ಕ್ಷಯಿಕೆ:

ಇಲ್ಲಿ ಹೀಲಿಯಂ ಹೊರಸೂಸಲ್ಪಡುತ್ತದೆ.

ಉದಾ: ಯುರೇನಿಯಂ , ನ್ಯೂಕ್ಲಿಯಸ್‌ ಅನ್ನು ಹೊರಸೂಸುವುದರೊಂದಿಗೆ Th ಆಗುತ್ತದೆ.

ಇಲ್ಲಿ ಉತ್ಪನ್ನ ನ್ಯೂಕ್ಲಿಯಸ್‌ಗಳ ಒಟ್ಟು ರಾಶಿಯು ಮೂಲ ನ್ಯೂಕ್ಲಿಯಸ್ಸಿನ ರಾಶಿಗಿಂತ ಕಡಿಮೆ ಇದ್ದಾಗ ಮಾತ್ರ ಸ್ವಯಂ ಕ್ಷಯಿಕೆ ಸಾಧ್ಯ ಎಂಬುದನ್ನು ಐನ್‌ಸ್ಟೈನರ ರಾಶಿ-ಶಕ್ತಿ ಸಂಬಂಧ ಮತ್ತು ಶಕ್ತಿ ಸಂರಕ್ಷಣೆಯ ನಿಯಮ ಪ್ರತಿಪಾದಿಸುತ್ತದೆ.
ಸಾಮಾನ್ಯವಾಗಿ ಕ್ಷಯಿಸುವಿಕೆಯಲ್ಲಿ

ವಿಘಟನ ಶಕ್ತಿ ಅಥವಾ ಬೈಜಿಕ ಕ್ರಿಯೆಯಲ್ಲಿನ ಬೆಲೆಯು ಆರಂಭಿಕ ರಾಶಿ ಶಕ್ತಿ ಮತ್ತು ಕ್ಷಯಿಕ ಉತ್ಪನ್ನಗಳ ಒಟ್ಟು ರಾಶಿ ಶಕ್ತಿಗಳ ನಡುವಿನ ವ್ಯತ್ಯಾಸವಾಗಿದ್ದರೆ a - ಕ್ಷಯಿಕೆ

ಇಲ್ಲಿ mx ಮತ್ತು my ಗಳು mHe ಕ್ರಮವಾಗಿ ಆರಂಭಿಕ, ಕ್ಷಯಿಕೆ, ಆಲ್ಫಾ ಕಣಗಳ ರಾಶಿಯಾಗಿದೆ.

ಬೀಟಾ ಕ್ಷಯಿಕೆ:

ಬೀಟಾ ಕ್ಷಯಿಕೆಯಲ್ಲಿ ಒಂದು ನ್ಯೂಕ್ಲಿಯಸ್ ಸ್ವಯಂ ಪ್ರೇರಿತವಾಗಿ ಒಂದು ಎಲೆಕ್ಟ್ರಾನ್‌ (B- ಕ್ಷಯಿಕೆ) ಅಥವಾ ಒಂದು ಪೊಸಿಟ್ರಾನ್ ( ಕ್ಷಯಿಕೆ ) ವಿಸರ್ಜಿಸುತ್ತದೆ.

ಉದಾಹರಣೆ:

ಇಲ್ಲಿ ವಿಸರ್ಜಿಸುವ ನ್ಯೂಟ್ರಿನೊಗಳು ತಟಸ್ಥ ಕಣಗಳಾಗಿದ್ದು ಅವುಗಳ ರಾಶಿಯು ಅತ್ಯಂತ ಕಡಿಮೆಯಾಗಿರುತ್ತದೆ. ಇವು ಯಾವುದೇ ವಸ್ತುವಿನ ಮೂಲಕ ತೂರಿಕೊಂಡು ಹೋಗುತ್ತದೆ.

ಸಾಮಾನ್ಯವಾಗಿ – ಕ್ಷಯಿಕೆಯಲ್ಲಿ ರಾಶಿ ಸಂಖ್ಯೆ A ಬದಲಾಗದೆ - ಕ್ಷಯಿಕೆಯಲ್ಲಿ Z ಸಂಖ್ಯೆ 1 ರಷ್ಟು ಹೆಚ್ಚಾಗಿಯೂ
- ಕ್ಷಯಿಕೆಯಲ್ಲಿ Z ಸಂಖ್ಯೆ 1 ರಷ್ಟು ಕಡಿಮೆಯಾಗುತ್ತದೆ.

ಕ್ಷಯಿಕೆ ಹಿಂದಿರುವ ಪ್ರಕ್ರಿಯೆ ನ್ಯೂಟ್ರಾನ್ ಮತ್ತು ಪ್ರೋಟಾನ್‌ಗಳ ನಡುವಿನ ಪರಿವರ್ತನೆಯಾಗಿದ್ದು,

ಗಾಮಾ( ) ಕ್ಷಯಿಕೆ:

ಭೂ ಸ್ಥಿತಿ ಮತ್ತು ಉದ್ರೇಕಿತ ಮಟ್ಟಗಳಂತೆ ಸಹ ವಿವಿಕ್ತ ಶಕ್ತಿಯ ಮಟ್ಟಗಳನ್ನು ಹೊಂದಿರುವ ನ್ಯೂಕ್ಲಿಯಸ್‌ನಲ್ಲಿ ಉದ್ರೇಕಿತ ಸ್ಥಿತಿಯಲ್ಲಿರುವ ಒಂದು ನ್ಯೂಕ್ಲಿಯಸ್ ಸ್ವಪ್ರೇರಣೆಯಿಂದ ಭೂಸ್ಥಿತಿ ಮಟ್ಟಕ್ಕೆ (ಅಥವಾ ಕಡಿಮೆ ಆಕ್ತಿಯ ಮಟ್ಟಕ್ಕೆ) ಕ್ಷಯಿಸಿದಾಗ, ಒಂದು ಫೋಟಾನು ವಿಸರ್ಜಿತವಾಗುತ್ತದೆ. ಮತ್ತು ಅದರ ಶಕ್ತಿಯು ಆ ಎರಡು ಶಕ್ತಿ ಮಟ್ಟಗಳ ನಡುವಿನ ವ್ಯತ್ಯಾಸಕ್ಕೆ ಸಮನಾಗಿರುತ್ತದೆ. ಇದನ್ನು ಗಾಮಾ-ಕ್ಷಯಿಕೆ ಎನ್ನುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.