ADVERTISEMENT

ಎರಡು ಚರಾಕ್ಷಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:08 IST
Last Updated 2 ಮಾರ್ಚ್ 2021, 4:08 IST
   

ಗಣಿತ

ಸರಳರೇಖೆ ಮೇಲಿರುವ ಪ್ರತಿಯೊಂದು ಬಿಂದುವೂ ಸಮೀಕರಣಕ್ಕೆ ಸರಿಹೊಂದುತ್ತದೆ ಮತ್ತು ಸಮೀಕರಣದ ಪ್ರತಿಯೊಂದು ಪರಿಹಾರವೂ ಸರಳರೇಖೆಯ ಮೇಲಿನ ಒಂದು ಬಿಂದುವಾಗಿದೆ ಎಂದು ತೀರ್ಮಾನಿಸಬಹುದು. ಎರಡು ಚರಾಕ್ಷರಗಳಿರುವ ಒಂದು ರೇಖಾತ್ಮಕ ಸಮೀಕರಣವನ್ನು ಒಂದು ಸರಳರೇಖೆಯ ಮೂಲಕ ರೇಖಾಗಣಿತೀಯವಾಗಿ ಪ್ರತಿನಿಧಿಸುತ್ತೇವೆ.

ಒಂದನೆಯ ಘಾತದಲ್ಲಿರುವ ಬಹು ಪರೋಕ್ಷ ಸಮೀಕರಣ ax+by+c=0 ಯನ್ನು ರೇಖಾತ್ಮಕ ಸಮೀಕರಣ ಎನ್ನುವ ಅದರ ರೇಖಾಗಣಿತೀಯ ಪ್ರತಿನಿಧಿಸುವಿಕೆಯು ಒಂದು ಸರಳ ರೇಖೆಯಾಗಿರುವುದು.

ADVERTISEMENT

ಉದಾಹರಣೆ: x+y=7 ನಕ್ಷೆಯನ್ನು ಬರೆಯಿರಿ:

ಪರಿಹಾರ: ನಕ್ಷೆಯನ್ನು ರಚಿಸಲು ಆ ಸಮೀಕರಣದ ಕನಿಷ್ಠ ಎರಡು ಪರಿಹಾರಗಳು ನಮಗೆ ಬೇಕು. x=0, y=7 ಮತ್ತು x=7, y=0ಇವುಗಳ ದತ್ತ ಸಮೀಕರಣ.

x ಅಕ್ಷ y ಮತ್ತು ಅಕ್ಷಗಳಿಗೆ ಸಮಾಂತರವಾಗಿರುವ ರೇಖೆಗಳ ಸಮೀಕರಣಗಳು

x ಎಂಬ ಒಂದು ಚರಾಕ್ಷರವನ್ನು ಮಾತ್ರ ಹೊಂದಿರುವ ಒಂದು ಸಮೀಕರಣವೆಂದು ನಾವಿದನ್ನು ತೆಗೆದುಕೊಂಡರೆ ಇದಕ್ಕೆ x=2 ಎಂಬ ಏಕೈಕ ಪರಿಹಾರವಿರುತ್ತದೆ ಮತ್ತು ಇದು ಸಂಖ್ಯಾರೇಖೆಯ ಮೇಲಿನ ಒಂದು ಬಿಂದುವಾಗಿದೆ. ಎರಡು ಚರಾಕ್ಷರಗಳಿರುವ ಒಂದು ಸಮೀಕರಣವೆಂದು ಪರಿಗಣಿಸಿದರೆ ಇದನ್ನು x+0. y-2=0 ಎಂದು ವ್ಯಕ್ತಪಡಿಸಬಹುದು. ಇದಕ್ಕೆ ಅಪರಿಮಿತ ಪರಿಹಾರಗಳಿವೆ. ವಾಸ್ತವದಲ್ಲಿ ಇವುಗಳೆಲ್ಲಾ (2, r)ರೂಪದಲ್ಲಿರುತ್ತವೆ. ಮತ್ತು r ಯಾವುದೇ ವಾಸ್ತವ ಸಂಖ್ಯೆಯಾಗಿದೆ.

(2, r) ರೂಪದಲ್ಲಿರುವ ಪ್ರತಿಯೊಂದು ಬಿಂದುವೂ ಈ ಸಮೀಕರಣಕ್ಕೆ ಪರಿಹಾರವಾಗುತ್ತದೆ.

ಉದಾಹರಣೆ: 2 x+1= x-3 ಸಮೀಕರಣವನ್ನು ಬಿಡಿಸಿ ಪರಿಹಾರವನ್ನು ಕಾರ್ಟೀಷಿಯನ್‌ಯನ್ನು ಸಮತಲದ ಮೇಲೆ ಪ್ರತಿನಿಧಿಸಿ.

ಪರಿಹಾರ: 2 x+1= x-3 ನ್ನು ನಾವು ಬಿಡಿಸಿದಾಗ ಸಿಗುವುದು
2 x-x=-3 -1

x=-4 ಇದನ್ನು x+0. y=-4 ಎಂದು ಬರೆಯಬಹುದು.
ಇದು x ಮತ್ತು y ಚರಾಕ್ಷರಗಳಲ್ಲಿನ ಒಂದು ರೇಖಾತ್ಮಕ ಸಮೀಕರಣವಾಗಿದೆ. ಈಗ y ನ ಯಾವುದೇ ಬೆಲೆಯನ್ನು ತೆಗೆದುಕೊಂಡರೂ x=-4 ಸಮೀಕರಣಕ್ಕೆ x ನ ಬೆಲೆ ಸರಿಹೊಂದಬೇಕು.

ನಕ್ಷೆ AB ಯ ಸಮಾಂತರವಾದ ಒಂದು ಸರಳರೇಖೆ ಮತ್ತು y ಅಕ್ಷದಿಂದ ಏಕಮಾನ 4 ರೂಪದಲ್ಲಿ ಎಡಭಾಗದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.