ADVERTISEMENT

ಬೆಳಗಾವಿ ಕಣದಲ್ಲಿ 57 ಅಭ್ಯರ್ಥಿಗಳು; ಚಿಕ್ಕೋಡಿ ಅಖಾಡದಲ್ಲಿ 11 ಮಂದಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 14:23 IST
Last Updated 30 ಏಪ್ರಿಲ್ 2019, 14:23 IST
   

ಬೆಳಗಾವಿ: ಇಲ್ಲಿನ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ 7 ಮಂದಿ ಸೋಮವಾರ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು, ಅಂತಿಮವಾಗಿ 57 ಮಂದಿ ಕಣದಲ್ಲಿದ್ದಾರೆ.

‘ಅಶೋಕ ಹಣಜಿ (ಸರ್ವ ಜನತಾ ‍ಪಕ್ಷ), ಪಕ್ಷೇತರರಾದ ಜಿಲ್ಲಾ ಪಂಚಾಯ್ತಿ ಸದಸ್ಯ ಮೋಹನ ಮೋರೆ, ಅಶೋಕ ಚೌಗಲೆ, ಗುರುಪುತ್ರ ಕುಳ್ಳೂರ, ಸಂಗಮೇಶ ಚಿಕ್ಕನರಗುಂದ, ಸಂಜೀವ ಗಣಾಚಾರಿ, ಸಂಜಯ ಪಾಟೀಲ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ವಿಶಾಲ್‌ ತಿಳಿಸಿದ್ದಾರೆ.

66 ಅಭ್ಯರ್ಥಿಗಳು 76 ನಾಮಪತ್ರಗಳನ್ನು ಸಲ್ಲಿಸಿದ್ದರು. ಇಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. ಒಟ್ಟು 64 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಸಲ್ಲಿಸಿದ್ದರು. ನಾಮಪತ್ರ ವಾಪಸ್‌ ಪಡೆಯಲು ಸೋಮವಾರ ಕೊನೆ ದಿನವಾಗಿತ್ತು.

ADVERTISEMENT

ಕಣದಲ್ಲಿ ಉಳಿದವರು: ಸುರೇಶ ಅಂಗಡಿ (ಬಿಜೆಪಿ), ಬದ್ರುದ್ರೀನ್ ಕಮದೋಡ (ಬಹುಜನ ಸಮಾಜ ಪಕ್ಷ), ಡಾ.ವಿರೂಪಾಕ್ಷಪ್ಪ ಸಾಧುನವರ (ಕಾಂಗ್ರೆಸ್), ದಿಲಶಾದ ತಹಶೀಲ್ದಾರ್ (ರಿಪಬ್ಲಿಕನ್ ಪಾರ್ಟಿ), ಮಂಜುನಾಥ ರಾಜಪ್ಪನವರ (ಉತ್ತಮ ಪ್ರಜಾಕೀಯ ಪಕ್ಷ).

ಪಕ್ಷೇತರರು: ಅನಿಲ ಹೆಗಡೆ, ಅಶುತೋಷ ಕಾಂಬಳೆ, ಆನಂದ ಪಾಟೀಲ, ಉದಯ ಕುಂದರಗಿ, ಉದಯ ನಾಯಿಕ, ಓಂಕಾರ್‌ಸಿಗ್ ಬಾಟಿಯಾ, ಕಲ್ಲಪ್ಪ ಕೋವಾಡಕರ, ಕವಿತಾ ಕೆ., ಕೃಷ್ಣಕಾಂತ ಬಿರ್ಜೆ, ಗಜಾನನ ತೋಕಣಿಕರ, ಗಣೇಶ ದಡ್ಡಿಕರ, ಗೋಪಾಲ ದೇಸಾಯಿ, ಚೇತನಕುಮಾರ್ ಕಾಂಬಳೆ, ಧನಂಜಯ ಪಾಟೀಲ, ನಾಗೇಶ ಬೊಬಾಟೆ, ನಿತಿನ ಆನಂದಾಚೆ, ನೀಲಕಂಠ ಪಾಟೀಲ, ನಂದಾ ಕೊಡಚವಾಡಕರ, ಪ್ರಕಾಶ ನೇಸರಕರ, ಪ್ರಣಾಮ ‍ಪಾಟೀಲ, ಪಾಂಡುರಂಗ ಪಟ್ಟಣ, ಬುಲಂದ ದಳವಿ, ಮಹಾದೇವ ಮಂಗನಾಕರ, ಮಾರುತಿ ಚೌಗಲೆ, ಮೇಘರಾಜ ಖಾನಗೌಡರ, ರಣಜಿತ ಪಾಟೀಲ, ರಾಜು ದಿವಟಗೆ, ರಾಜೇಂದ್ರ ಪಾಟೀಲ, ರಾಮಚಂದ್ರ ಗಾವಕರ, ರಾಮಚಂದ್ರ ಪಾಟೀಲ, ಲಕ್ಷ್ಮಣ ದಳವಿ, ಲಕ್ಷ್ಮಣರಾವ ಮೇಲಗೆ, ಲಕ್ಷ್ಮಿ ಮುತಗೇಕರ, ವಿಜಯ ಉರ್ಫ್‌ ಗಿಡ್ಡಪ್ಪ ಮಾದರ, ವಿಜಯ ‍ಪಾಟೀಲ, ವಿನಾಯಕ ಗುಂಜಟಕರ, ವಿನಾಯಕ ಮೋರೆ, ವಿಶ್ವನಾಥ ಬುವಾಜಿ, ಶಿವರಾಜ ಪಾಟೀಲ, ಶ್ರೀಕಾಂತ ಕದಮ್, ಶುಭಂ ಶೆಳಕೆ, ಶಂಕರ ಚೌಗಲೆ, ಶಂಕರ ರಾಠೋಡ, ಸಚಿನ ಕೇಳವೆಕರ, ಸಚಿನ ನಿಕ್ಕಂ, ಸುನೀಲ ದಾಸರ, ಸುನೀಲ ಗುಡ್ಡಕಾಯು, ಸುರೇಶ ಮರಲಿಂಗಣ್ಣವರ, ಸುರೇಶ ರಾಜುಕರ, ಸಂಜಯ ಕಾಂಬಳೆ, ಸಂದೀಪ ಲಾಡ್.

‘ವಿದ್ಯುನ್ಮಾನ ಮತಯಂತ್ರಗಳಲ್ಲೇ (ಇವಿಎಂ) ಚುನಾವಣೆ ನಡೆಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಬ್ಯಾಲೆಟ್ ಯುನಿಟ್‌ಗಳನ್ನು ಇಡಲಾಗುವುದು’ ಎಂದು ಚುನಾವಣಾಧಿಕಾರಿ ವಿಶಾಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಚಿಕ್ಕೋಡಿ: ಕಣದಲ್ಲಿ 11 ಮಂದಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಟ್ಟು 13 ಅಭ್ಯರ್ಥಿಗಳಲ್ಲಿ ಇಬ್ಬರು ಸೋಮವಾರ ಕಣದಿಂದ ಹಿಂದೆ ಸರಿದಿದ್ದಾರೆ.

‘ಶೈಲಾ ಕೋಳಿ, ಮಲ್ಲಪ್ಪ ಖಟಾಂವೆ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ’ ಎಂದು ಚುನಾವಣಾಧಿಕಾರಿ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಕಣದಲ್ಲಿರುವವರು: ಪ್ರಕಾಶ ಹುಕ್ಕೇರಿ (ಕಾಂಗ್ರೆಸ್), ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ), ಬಳಿಗಟ್ಟಿ ಪ್ರವೀಣಕುಮಾರ (ಉತ್ತಮ ಪ್ರಜಾಕೀಯ ಪಕ್ಷ). ಪಕ್ಷೇತರರು: ಮಗದುಮ್ ಇಸ್ಮಾಯಿಲ್ ಮಗದುಮ್, ಮೋಹನ ಮೋಟಣ್ಣವರ, ಜಿತೇಂದ್ರ ನೇರ್ಲೆ, ಶ್ರೇಣಿಕ್ ಜಂಗಟೆ, ಅಪ್ಪಾಸಾಹೇಬ ಕುರಣೆ, ಮಚ್ಚೇಂದ್ರ ಕಾಡಾಪುರೆ, ಕಲ್ಲಪ್ಪ ಗುಡಸಿ ಮತ್ತು ವಿಶ್ವನಾಥ ಕಲ್ಲೋಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.