
ಪ್ರಜಾವಾಣಿ ವಾರ್ತೆ
ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ಸದ್ಯ ಲೋಕಸಭೆ ಚುನಾವಣಾ ಕಾವು ರಂಗೇರತೊಡಗಿದ್ದು ಮತ ದಾರರು ಯಾವುದೇ ಆಶೆ ಆಮಿಷಗಳಿಗೆ ಬಲಿ ಆಗದೆ ಉತ್ತಮ ಅಭ್ಯರ್ಥಿಗಳಿಗೆ ಮತ ಹಾಕಬೇಕು.
ಪ್ರಜೆಗಳಿಗಾಗಿ ಇರುವ ಸರ್ಕಾರವೇ ಪ್ರಜಾಪ್ರಭುತ್ವ. ಇಲ್ಲಿ ದೇಶದ ಜನರೇ ಪ್ರಭು ಗಳು. ಹೀಗಾಗಿ ಮತದಾರರಿಗೆ ಇಲ್ಲಿ ಹೆಚ್ಚಿನ ಮಹತ್ವ. ಕಾರಣ ಮತ ದಾರರು ಹಣ, ಹೆಂಡ, ಜಾತಿ ರಾಜಕಾರಣಕ್ಕೆ ಮರುಳಾಗದೆ ಒಳ್ಳೆಯ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಹೆಸರು ಉಳಿಸಿಕೊಳ್ಳಬೇಕು.
-ಬಸವರಾಜ ಮೆಕ್ಕಿ, ಹೈಕೋರ್ಟ್ ವಕೀಲ, ಲಕ್ಷ್ಮೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.