ADVERTISEMENT

ವೋಟ್ ಮಾಡೋಣ ಬನ್ನಿ: ಉಳ್ಳಿಯಡ ಭುವನ್ ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 5:23 IST
Last Updated 8 ಏಪ್ರಿಲ್ 2024, 5:23 IST
ಉಳ್ಳಿಯಡ ಭುವನ್ ಪೊನ್ನಣ್ಣ, ನಟ.
ಉಳ್ಳಿಯಡ ಭುವನ್ ಪೊನ್ನಣ್ಣ, ನಟ.   

ಎಲ್ಲರೂ ಹಕ್ಕು ಚಲಾಯಿಸಬೇಕು

ಅರ್ಹರಾಗಿರುವ ಎಲ್ಲರೂ ಖಂಡಿತವಾಗಿಯೂ ಮತದಾನ ಮಾಡಬೇಕು. ನಮಗೆ ರಸ್ತೆ ಇಲ್ಲ, ನೀರು ಇಲ್ಲ, ಬಸ್‌ ಇಲ್ಲ... ಹೀಗೆ ಅನೇಕ ಸೌಕರ್ಯಗಳ ಕೊರತೆಯ ಬಗ್ಗೆ ಜನರು ಮಾತನಾಡುತ್ತಲೇ ಇರುತ್ತಾರೆ. ಆದರೆ, ಚುನಾವಣೆ ಬಂದಾಗ ಕೆಲವರು ಮತದಾನ ಮಾಡದೇ ಸುಮ್ಮನಿರುತ್ತಾರೆ. ಇದು ನಿಜಕ್ಕೂ ಸರಿಯಲ್ಲ. ಚುನಾವಣೆ ಬಂದಾಗ ಈ ಎಲ್ಲ ಕೊರತೆಗಳನ್ನು ನೀಗಿಸುವ ಭರವಸೆ ಇರುವ ಅಭ್ಯರ್ಥಿಗೆ ಮತದಾನ ಮಾಡಬೇಕು.

ಚುನಾವಣೆಯ ಹೊತ್ತಿನಲ್ಲಿ ವಿವಿಧ ಬಗೆಯ ಆಮಿಷಗಳಿಗೆ ಒಳಗಾಗುವುದು ಕೂಡ ಸರಿಯಲ್ಲ. ಜಾತಿ, ಹಣ, ಉಡುಗೊರೆ...  ಹೀಗೆ ಮತದಾರರನ್ನು ಸೆಳೆಯಲು ಏನೆಲ್ಲ ಆಮಿಷಗಳನ್ನು ಒಡ್ಡಿದರೂ, ಜನರು ಮರುಳಾಗಬಾರದು.

ADVERTISEMENT

ಕೊರತೆಗಳನ್ನು ತುಂಬುವ, ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇರುವ, ಮುಖ್ಯವಾಗಿ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ, ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎಂಬುದನ್ನು ಚಿಂತಿಸಿ, ಪ್ರಜ್ಞಾಪೂರ್ವಕವಾಗಿ ಮತದಾನ ಮಾಡಬೇಕು.

-ಉಳ್ಳಿಯಡ ಭುವನ್ ಪೊನ್ನಣ್ಣ, ನಟ

ಉಳ್ಳಿಯಡ ಭುವನ್ ಪೊನ್ನಣ್ಣ ನಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.