ADVERTISEMENT

ಕಾಂಗ್ರೆಸ್‌ನಿಂದ ಸೇನೆಗೆ ಪದೇಪದೇ ಅವಮಾನ: ನಿರ್ಮಲಾ ಸೀತಾರಾಮನ್ ಆಕ್ರೋಶ

ರಾಜ್ಯದ ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 16:45 IST
Last Updated 30 ಏಪ್ರಿಲ್ 2019, 16:45 IST
ಕಾರವಾರದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು
ಕಾರವಾರದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು   

ಕಾರವಾರ:ಸೇನೆಯ ಪರಾಕ್ರಮವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ರಾಜಕೀಯ ಇಚ್ಛಾಶಕ್ತಿಯಿಂದ ಆಗಿರುವ ಕಾರ್ಯಕ್ರಮಗಳನ್ನು ಹೇಳುವುದು ರಾಜಕೀಯಗೊಳಿಸಿದಂತೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ನಗರದಲ್ಲಿಸೋಮವಾರ ಹಮ್ಮಿಕೊಳ್ಳಲಾದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸೇನೆಯನ್ನು ಟೀಕಿಸಿದರಾಜ್ಯದ ಮೂವರು ಕಾಂಗ್ರೆಸ್ ಮುಖಂಡರನ್ನು ಅವರ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡರು.

‘ಕರ್ನಾಟಕ ಕಾಂಗ್ರೆಸ್‌ನ ಮುಖಂಡರೊಬ್ಬರು ಕನ್ನಡದಲ್ಲಿ ಬಹಳ ಸಾಹಿತ್ಯ ಬರೆಯುತ್ತಾರೆ. ಅವರು ವಾಯುಸೇನೆಯ ಮುಖ್ಯಸ್ಥರನ್ನು ಸುಳ್ಳ ಎಂದು ಕರೆದರು. ದೆಹಲಿ ಮಟ್ಟದಲ್ಲಿ ಮತ್ತೊಬ್ಬರಿದ್ದಾರೆ. ಅವರು ಸೇನಾ ಮುಖ್ಯಸ್ಥರನ್ನು ಹಾದಿಬೀದಿಯ ಗೂಂಡಾ ಎಂದು ಜರಿದರು.ಇನ್ನೊಬ್ಬರುಲಂಡನ್‌ನಲ್ಲಿ ನಕಲಿ ವೆಬ್‌ಸೈಟ್ ಆರಂಭಿಸಿ, ಅಲ್ಲಿಂದ ವಿದ್ಯುನ್ಮಾನ ಮತಯಂತ್ರಗಳವಿಶ್ವಾಸಾರ್ಹತೆ ಪ್ರಶ್ನಿಸುತ್ತಾರೆ. ನೋಟು ಅಮಾನ್ಯೀಕರಣದ ಸಂದರ್ಭ ವಿದೇಶದಲ್ಲಿ ಮುದ್ರಣವಾದ ಭಾರತೀಯ ಕರೆನ್ಸಿಯನ್ನುವಾಯುಸೇನೆಯ ಮೂಲಕ ಹಿಂಡನ್ ವಿಮಾನ ನಿಲ್ದಾಣಕ್ಕೆ ತರಲಾಯಿತುಎಂದು ಸುಳ್ಳು ಆರೋಪಹೊರಿಸಿದರು. ಕಾಂಗ್ರೆಸ್‌ನವರು ಪದೇಪದೇ ಸೇನೆಗೆಏನಾದರೂಅವಮಾನ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಜವಾಹರಲಾಲ್ ನೆಹರೂ ಆಡಳಿತಾವಧಿಯಲ್ಲಿ ಜನರಲ್ ತಿಮ್ಮಯ್ಯ ಅವರಿಗೆ ಮಾಡಿದ ಅವಮಾನ ಮರೆಯಲು ಸಾಧ್ಯವೇ? ಫೀಲ್ಡ್ ಮಾರ್ಷಲ್ ಮಾನೆಕ್‌ ಷಾ ಅವರ ಅಂತ್ಯಕ್ರಿಯೆಯಲ್ಲಿ ಅಂದಿನ ಸರ್ಕಾರದ ಒಬ್ಬರೂ ಸಚಿವರು ಭಾಗವಹಿಸಲಿಲ್ಲ. ಇಂಥವರು ಸೇನೆಯನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ನಮಗೆ ಹೇಳುತ್ತಾರೆ. ನಾವು ಸೇನೆಯ ವಿಚಾರದಲ್ಲಿ ರಾಜಕೀಯ ಮಾ‌ಡುವುದೇ ಇಲ್ಲ’ ಎಂದರು.

‘ರಾಹುಲ್ ಜತೆ ಮೈಕೆಲ್ ಕುಟುಂಬ’: ‘ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಕ್ರಿಶ್ಚಿಯನ್ ಮೈಕೆಲ್, ಕಿಕ್‌ಬ್ಯಾಕ್‌ ಹಣವನ್ನು ‘ಫ್ಯಾಮ್‌’ಗೆ (ಫ್ಯಾಮಿಲಿ) ಕೊಡಿಸಲಾಯಿತು ಎಂದು ಹೇಳಿದ್ದಾರೆ. ಅಂದರೆಕಾಂಗ್ರೆಸ್‌ನ ಮೊದಲ ಕುಟುಂಬಕ್ಕೆ ಎಂದರ್ಥ. ಅವರ ದಾಖಲೆಗಳಲ್ಲಿ‘ಎ.ಪಿ’ ಎಂಬ ಅಕ್ಷರಗಳಿವೆ. ಅದು ಅಹಮದ್ ಪಟೇಲ್ ಆಗಿರಬಹುದಾ, ನನಗೆ ಗೊತ್ತಿಲ್ಲ’ ಎಂದು ಹೇಳಿದರು.

‘ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗಪಕ್ಷದ ಮುಖಂಡರು, ಶಾಸಕರು ಇರುತ್ತಾರೆ. ಆದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಜತೆ ಕ್ರಿಶ್ಚಿಯನ್ ಮೈಕೆಲ್‌ ಕುಟುಂಬವಿತ್ತು. ಅಲ್ಲಿ ಎಲ್ಲರೂ ಕಾಂಗ್ರೆಸ್‌ ಅನ್ನು ಬಿಟ್ಟಿದ್ದಾರೆ. ಹಾಗಾಗಿಯೇ ಅಲ್ಲಿಂದ ಸ್ಪರ್ಧೆಗೆ ಹೆದರಿ ಕೇರಳಕ್ಕೆ ಬಂದರು. ಆಗಸ್ಟಾ ವೆಸ್ಟ್‌ಲ್ಯಾಂಡ್‌ಹಗರಣದಲ್ಲಿ ‘ಫ್ಯಾಮ್’ ಎಂದರೆ ನಿಮ್ಮ ಜೊತೆಗೆ ನಿಂತಿದ್ದವರೆಯೇ ಎಂದು ನಾನು ಕೇಳಲು ಬಯಸುತ್ತೇನೆ. ಅದಕ್ಕೆ ಉತ್ತರಿಸಲು ಸಿದ್ಧರಿದ್ದೀರಾ’ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.