ADVERTISEMENT

ಟಿಡಿಪಿ ಮೊದಲ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST

ಹೈದರಾಬಾದ್‌ (ಪಿಟಿಐ): ತೆಲಂಗಾಣ ಭಾಗದ ಲೋಕಸಭೆ ಹಾಗೂ ವಿಧಾನ­ಸಭೆ ಚುನಾವಣೆಗೆ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆ ಮಾಡಿತು. ‘ಸದ್ಯ ಮೂರು ಲೋಕಸಭೆ ಹಾಗೂ 27 ವಿಧಾನ­ಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ­ಗಳನ್ನು ಪ್ರಕಟಿಸ­ಲಾಗಿದ್ದು ಉಳಿದ ಕ್ಷೇತ್ರಗಳಿಗೆ ಆಯ್ಕೆ ನಡೆಯುತ್ತಿದೆ’ ಎಂದು ಪಕ್ಷದ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಏಪ್ರಿಲ್‌ 30ರಂದು 119 ವಿಧಾನ­ಸಭೆ ಹಾಗೂ 17 ಲೋಕಸಭೆ ಕ್ಷೇತ್ರಗಳಿಗೆ ಮತ­ದಾನ ನಡೆಯಲಿದೆ. ಟಿಡಿಪಿ ಮತ್ತು ಬಿಜೆಪಿ ಇಲ್ಲಿ ಮೈತ್ರಿ ಮಾಡಿ­ಕೊಂಡಿವೆ. ಸೀಟು ಹಂಚಿಕೆ ಪ್ರಕಾರ, ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಡಿಪಿ 72 ಮತ್ತು ಬಿಜೆಪಿ 47 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. 17 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 9 ಮತ್ತು ಬಿಜೆಪಿ 8 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.