
ಪ್ರಜಾವಾಣಿ ವಾರ್ತೆಫತೇಪುರ ಸಿಕ್ರಿ (ಐಎಎನ್‌ಎಸ್): ಉತ್ತರ ಪ್ರದೇಶದ ಅಜಂಗಡದಿಂದ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಪರ ಪ್ರಚಾರ ನಡೆಸುವ ಇಂಗಿತವನ್ನು ಫತೇಪುರ ಸಿಕ್ರಿ ಲೋಕಸಭೆ ಕ್ಷೇತ್ರದ ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಅಭ್ಯರ್ಥಿ ಅಮರ್ ಸಿಂಗ್ ವ್ಯಕ್ತಪಡಿಸಿದ್ದಾರೆ.
‘ಅಜಂಗಡದಿಂದ ಬಿಜೆಪಿ ಗೆಲ್ಲುವುದನ್ನು ಬಯಸುವುದಿಲ್ಲ’ ಎಂದು ಬುಧವಾರ ಸಂಜೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಫತೇಪುರ ಸಿಕ್ರಿಯಲ್ಲಿ ಬುಧವಾರ ನಡೆಸಿದ ರೋಡ್ ಷೋಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟಿ ಜಯಪ್ರದಾ ಸೇರಿ ಹಲವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.