ಪೋರ್ಟ್ಬ್ಲೇರ್ (ಪಿಟಿಐ): ಶಿಲಾಯುಗದ ಕೊನೆಯ ಬುಡಕಟ್ಟು ಜನಾಂಗಗಳಲ್ಲಿ ಒಂದು ಎಂದು ಗುರು-ತಿಸಲಾದ ಶೊಂಪೆನ್ ಸಮುದಾಯಕ್ಕೆ ಸೇರಿದವರು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಗುರುವಾರ ಮತ ಚಲಾಯಿಸಿದರು.
ಗ್ರೇಟ್ ನಿಕೋಬಾರ್ ದ್ವೀಪದ ನಿವಾಸಿಗಳಾದ ಶೊಂಪೆನ್ ಸಮುದಾಯದವರು ಕೊಲ್ಲಿ ದ್ವೀಪ ಸಮೂಹದ ಜನಪ್ರತಿನಿಧಿ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಥಮ ಬಾರಿಗೆ ಪಾಲ್ಗೊಂಡರು.
‘ನಿಕೋಬಾರ್ ಜೈವಿಕಮಂಡಲದ ರಕ್ಷಿತಾರಣ್ಯದಲ್ಲಿ ಸ್ಥಾಪಿಸಲಾದ ವಿಶೇಷ ಮತಗಟ್ಟೆಯಲ್ಲಿ ಸುಮಾರು 60 ಮಂದಿ ಮತದಾನ ಮಾಡಿದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅರಣ್ಯದಲ್ಲಿ ನೆಲೆಸಿರುವ ಆರು ಬುಡಕಟ್ಟು ಸಮುದಾಯಗಲ್ಲಿ ಶೊಂಪೆನ್ ಜನಾಂಗ ಕೂಡ ಒಂದು. 2011ರ ಜನಗಣತಿ ಪ್ರಕಾರ ಇವರ ಸಂಖ್ಯೆ ಕೇವಲ 229.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.