ADVERTISEMENT

ಮೋದಿ ಬೆಂಬಲಕ್ಕೆ ಅಮೆರಿಕ ಭಾರತೀಯರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಅಹಮದಾಬಾದ್‌ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. 2012ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಬರಾಕ್ ಒಬಾಮ ಪರ ನಿಧಿ ಸಂಗ್ರಹಣೆ ಕಾರ್ಯ ನಡೆಸಿದ್ದ ಅನಿವಾಸಿ ಭಾರತೀಯರ ಗುಂಪು ಈಗ ಮೋದಿ ಅವರನ್ನು ಬೆಂಬಲಿಸಲು ಭಾರತಕ್ಕೆ ಬಂದಿದೆ.

ಭರತ್ ಬರೇಯ್ ನೇತೃತ್ವದ ‘ಭಾರತದ ವಿಕಾಸಕ್ಕಾಗಿ ಜಾಗತಿಕ ಭಾರತೀಯರು’ ಸಂಘಟನೆಯ 650 ಅನಿವಾಸಿ ಭಾರತೀಯರು, ಗುಜರಾತ್‌­ನಲ್ಲಿ, ‘ಪ್ರಧಾನಿ ಪಟ್ಟಕ್ಕೆ ಮೋದಿ’ ಪ್ರಚಾರ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.

‘ಅಮೆರಿಕದ ಬಹುತೇಕ ಭಾರತೀಯರು ಮೋದಿ ಅವರನ್ನು ಪ್ರಧಾನಿಯಾಗಿ ನೋಡಲು ಬಯಸು­ತ್ತಾರೆ. ಆದ್ದರಿಂದ ನಾವು ಈ ಅಭಿಯಾನ ಕೈಗೊಂಡಿದ್ದೇವೆ. ‘ದೇಶ ಮೊದಲು’ ನೀತಿ­ಯಲ್ಲಿ ಮೋದಿ ಹಾಗೂ ಒಬಾಮ ಅವರದು ಒಂದೇ ನಿಲುವು’ ಎಂದು ಷಿಕಾಗೋದ ವೈದ್ಯ ಭರತ್‌ ಬರೇಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.