ADVERTISEMENT

‘ಕೈಯಲ್ಲಿ ರಕ್ತದ ಕಲೆ ಇಟ್ಟುಕೊಂಡು ದೇಶದ ಕುರಿತು ಮಾತನಾಡದಿರಿ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST

ಕರಂಡಿಘಿ (ಪಶ್ಚಿಮ ಬಂಗಾಳ) (ಪಿಟಿಐ): ‘ತಮ್ಮ ಕೈಯಲ್ಲಿ ರಕ್ತದ ಕಲೆ­ಯನ್ನಿಟ್ಟುಕೊಂಡು ದೇಶದ ಕುರಿತು ಮಾತನಾಡುವುದು ಶೋಭೆ ತರು­ವುದಿಲ್ಲ’ ಎಂದು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ದಿನಾಪುರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಚುನಾವಣಾ ರ್‍್ಯಾಲಿ­ಯನ್ನು­ದ್ದೇಶಿಸಿ ಅವರು ಮಾತನಾಡಿದರು.
ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದಕ್ಕೆ ಪ್ರತಿಯಾಗಿ, ಮೋದಿ ಅವರ ಹೆಸರನ್ನು ಉಲ್ಲೇಖಿಸದೆ, ‘ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ತೃಣಮೂಲ ಕಾಂಗ್ರೆಸ್ ಕೇಂದ್ರ ಸರ್ಕಾರದ ಭಾಗವಾಗಿತ್ತು.

ಆಗ ಗೋಧ್ರಾ ಹಿಂಸಾಚಾರಕ್ಕೆ ಗುಜರಾತ್‌ ಸಾಕ್ಷಿಯಾಯಿತು. ಆದರೆ ಇಂತಹ ಗಲಭೆಯನ್ನು ಜನ ಬೆಂಬಲಿಸುವುದಿಲ್ಲ’ ಎಂದರು.

‘ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷ­ಗಳು ದೇಶ ವಿಭಜನೆಗೆ ನಿಂತಿವೆ. ತೆಲಂಗಾಣ ರಾಜ್ಯ ರಚನೆಯೇ ಇದಕ್ಕೆ ನಿದರ್ಶನ. ಆದರೆ, ನನ್ನ ಪ್ರಾಣ ಹೋದರೂ ಸರಿ, ಹಿಂದೂ ಮತ್ತು ಮುಸ್ಲಿಮರಲ್ಲಿ ಬಿರುಕು ಮೂಡಲು ಅವಕಾಶ ನೀಡುವುದಿಲ್ಲ’ ಎಂದು ಅವರು ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.