ಪ್ರಜಾಪ್ರಭುತ್ವ, ಸಂವಿಧಾನ, ಚುನಾವಣೆಗಳ ಬಗ್ಗೆ ಓದಿದ್ದೆ. ಶಾಲೆ ಕಾಲೇಜಿನಲ್ಲಿ ಅಣಕು ಪ್ರದರ್ಶನ ಮಾಡಿದ್ದೆ. ಆದರೆ, ಈಗ ನಿಜವಾಗಿಯೂ ನಾನು ಮತದಾರಳು. ಈ ವಿಷಯ ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಖಂಡಿತವಾಗಿ ನಾನು ನನ್ನ ಹಕ್ಕು ಚಲಾಯಿಸುತ್ತೇನೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಹಿಂದುಳಿದಿದ್ದೇವೆ ಎಂದು ಹೇಳಿಕೊಳ್ಳುತ್ತ ಕೂಡುವ ಕಾಲ ಇದಲ್ಲ. ನಾವು ಸರಿಯಾದ ವ್ಯಕ್ತಿಗೆ ಮತ ಹಾಕಿ, ಸರಿಯಾದ ಸರ್ಕಾರ ಆಯ್ಕೆ ಮಾಡಿದರೆ ನಮ್ಮ ಸಮಸ್ಯೆಗಳು ನೀಗುತ್ತವೆ. ಈಗ ಆ ಹಕ್ಕು ನನಗೆ ಸಿಕ್ಕಿದೆ.
–ಜಯಶ್ರೀ ಪರಸಪ್ಪ ಗೋಕಾಕ, ಬೆಳಗಾವಿ
ಇದೇ ಮೊದಲ ಬಾರಿಗೆ ನಾನು ಮತ ಚಲಾಯಿಸುವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಮತದಾನ ಮುಖ್ಯ ಎಂಬುದನ್ನು ಅರಿತಿದ್ದೇನೆ. ಉತ್ತಮ ಜನಪ್ರತಿನಿಧಿ ಆಯ್ಕೆಗೆ ಆದ್ಯತೆ ನೀಡುವೆ. ಮತದಾನ ಪ್ರಮಾಣ ಹೆಚ್ಚಾದಷ್ಟೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾನ್ಯತೆ ಸಿಗುತ್ತದೆ. ನಾನು ತಪ್ಪದೇ ಮತ ಚಲಾಯಿಸುವೆ. ಸ್ನೇಹಿತರಿಗೂ ಪ್ರೇರೇಪಿಸುವೆ.
ಕ್ರಿಜಲ್ ಮೇಥಾ ಕಾರವಾರ, ವಿದ್ಯಾರ್ಥಿ, ಉತ್ತರ ಕನ್ನಡ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.