ADVERTISEMENT

ಎಂಥಾ ಮಾತು!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 3:17 IST
Last Updated 18 ಏಪ್ರಿಲ್ 2024, 3:17 IST
<div class="paragraphs"><p><strong>ಡಿ.ಕೆ. ಸುರೇಶ್</strong></p></div>

ಡಿ.ಕೆ. ಸುರೇಶ್

   

ಬಿಜೆಪಿ ಬಳಿ ಐ.ಟಿ ಮತ್ತು ಇ.ಡಿ ಅಸ್ತ್ರ ಬಿಟ್ಟರೆ ಬೇರೇನೂ ಇಲ್ಲ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಐ.ಟಿ ಮತ್ತು ಇ.ಡಿ ದಾಳಿಯ ಅಸ್ತ್ರಗಳನ್ನು ನಮ್ಮ ಮೇಲೆ ಪ್ರಯೋಗಿಸುತ್ತಿದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ನಡೆಯುವ ಈ ದಾಳಿಗಳು ನಮಗೇನೂ ಹೊಸದಲ್ಲ. ಏನಾದರೂ ಮಾಡಿ ನಮ್ಮನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಬೇಕೆಂಬ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ತಾಕತ್ತಿದ್ದರೆ ಪ್ರಧಾನಿ ಮೋದಿ ಅವರು ಬೆಲೆ ಏರಿಕೆ, ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಕೊಟ್ಟಿರುವ ಭರವಸೆಗಳ ಕುರಿತು ಮಾತನಾಡಲಿ – ಡಿ.ಕೆ. ಸುರೇಶ್, ಕಾಂಗ್ರೆಸ್‌ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ (ತಮ್ಮ ಆಪ್ತರ ಮೇಲೆ ನಡೆದ ಐ.ಟಿ ದಾಳಿ ಕುರಿತು ಪ್ರತಿಕ್ರಿಯೆ)

ನಮ್ಮ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಮುಂದೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ. ಅವರ ಕನಸು ಈಡೇರಿದರೆ ಒಳ್ಳೆಯದೇ. ಉತ್ತರ ಕರ್ನಾಟಕದವರೊಬ್ಬರು ಮುಖ್ಯಮಂತ್ರಿಯಾದರೆ ನಾವೂ ಖುಷಿಪಡುತ್ತೇವೆ. ಯತ್ನಾಳ ಅವರು ನಮ್ಮ ಕುಟುಂಬದ ಬಗ್ಗೆ ಟೀಕೆ ಮಾಡಿಲ್ಲ. ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಟೀಕಿಸಿದ್ದಾರೆ. ಅದಕ್ಕೆ ಸಚಿವರೇ ಉತ್ತರಿಸಬೇಕೆ ವಿನಃ ನಾನಲ್ಲ – ಬಾಲಚಂದ್ರ ಜಾರಕಿಹೊಳಿ, ಶಾಸಕ 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.