ADVERTISEMENT

LS polls | ಎಂಥಾ ಮಾತು: ಸಚಿನ್‌ ಪೈಲಟ್, ರಾಜನಾಥ್‌ ಸಿಂಗ್‌ ಹೇಳಿಕೆ...

​ಪ್ರಜಾವಾಣಿ ವಾರ್ತೆ
Published 15 ಮೇ 2024, 0:21 IST
Last Updated 15 ಮೇ 2024, 0:21 IST
<div class="paragraphs"><p>ಸಚಿನ್‌ ಪೈಲಟ್</p></div>

ಸಚಿನ್‌ ಪೈಲಟ್

   

ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿಯಲ್ಲಿ ಸ್ಪರ್ಧಿಸುತ್ತಿರುವುದು ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಹೆಚ್ಚಿನ ಲಾಭ ಉಂಟುಮಾಡಲಿದೆ. ರಾಹುಲ್ ಪರವಾಗಿ ನಾನು ರಾಯ್‌ಬರೇಲಿಯಲ್ಲಿ ಪ್ರಚಾರ ಕೈಗೊಂಡಿದ್ದು, ಅಲ್ಲಿ ಕಾಂಗ್ರೆಸ್‌ ಪರ ಅಲೆ ಇರುವುದನ್ನು ಗಮನಿಸಿದ್ದೇನೆ. ಎಲ್ಲ ಸಮುದಾಯಗಳ ಜನರೂ ರಾಹುಲ್‌ಗೆ ಮತ ಹಾಕಲಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಲಿದೆ

ಸಚಿನ್‌ ಪೈಲಟ್, ಕಾಂಗ್ರೆಸ್‌ ಮುಖಂಡ

ADVERTISEMENT

ಭಗವಾನ್‌ ರಾಮ ನಮ್ಮ ನಂಬಿಕೆಯ ಕೇಂದ್ರ ಎಂದು ನಾವು ಹೇಳಿದ್ದೆವು. ನಮಗೆ ಬಹುಮತ ಬಂದರೆ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಲಾಗುವುದು ಎಂಬ ಭರವಸೆ ಕೊಟ್ಟಿದ್ದೆವು. ಈಗ ನೀವೆಲ್ಲರೂ ನೋಡಿದ್ದೀರಿ, ರಾಮಮಂದಿರ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಭಗವಾನ್ ರಾಮನು ಗುಡಿಸಲಿನಿಂದ ಹೊರಬಂದು ಅರಮನೆ ಪ್ರವೇಶಿಸಿದ್ದಾನೆ ಎಂದು ನನಗನಿಸುತ್ತಿದೆ. ದೇಶದಲ್ಲಿ ರಾಮರಾಜ್ಯ ಆರಂಭವಾಗಲಿದೆ ಎಂಬುದು ನನ್ನ ದೃಢವಾದ ನಂಬಿಕೆ 

ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ರಾಜನಾಥ್‌ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.