ADVERTISEMENT

ಆಂಧ್ರ ಮಾಜಿ ಸಚಿವೆ ಟಿಆರ್‌ಎಸ್‌ಗೆ

ಆಯಾರಾಂ ಗಯಾರಾಂ‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಹೈದರಾಬಾದ್‌ (ಐಎಎನ್‌ಎಸ್‌): ಆಂಧ್ರಪ್ರದೇಶದ ಮಾಜಿ ಸಚಿವೆ ಕೊಂಡಾ ಸುರೇಖಾ ಹಾಗೂ ಅವರ ಪತಿ ಕೊಂಡಾ ಮುರಳಿ ಅವರು ಮಂಗಳವಾರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸೇರಿದ್ದಾರೆ.

ಪ್ರತ್ಯೇಕ ತೆಲಂಗಾಣ ರಚನೆಯನ್ನು ವಿರೋಧಿಸಿದ್ದಕ್ಕಾಗಿ ಕಳೆದ ವರ್ಷ ವೈಎಸ್‌ಆರ್‌ ಕಾಂಗ್ರೆಸ್‌ ತೊರೆದಿದ್ದ ಸುರೇಖಾ ಹಾಗೂ ಮುರಳಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಸೇರಿದ್ದರು. 2009ರಲ್ಲಿ ಇವರು ಕಾಂಗ್ರೆಸ್‌ ತೊರೆದಿದ್ದರು.

ಬಿಜೆಪಿಗೆ ಎನ್‌ಸಿಪಿ ಮುಖಂಡ (ಮುಂಬೈ ವರದಿ): ಎನ್‌ಸಿಪಿಯ ಠಾಣೆ ಗ್ರಾಮೀಣ ಜಿಲ್ಲಾ ಘಟಕದ ಮುಖ್ಯಸ್ಥ­ರಾಗಿದ್ದ ಕಪಿಲ್‌ ಪಾಟೀಲ್‌ ಮಂಗಳ­ವಾರ ಬಿಜೆಪಿ ಸೇರಿದ್ದಾರೆ.ಭಿವಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.