ADVERTISEMENT

ಖಲಿ ಬೇಡ: ಟಿಎಂಸಿ ದೂರು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 18:25 IST
Last Updated 28 ಏಪ್ರಿಲ್ 2019, 18:25 IST
ಗ್ರೇಟ್ ಖಲಿ
ಗ್ರೇಟ್ ಖಲಿ   

ಕೋಲ್ಕತ್ತ: ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ಪರವಾಗಿ ಪ್ರಚಾರ ನಡೆಸುತ್ತಿರುವ ಕುಸ್ತಿಪಟು ದಿಲೀಪ್ ಸಿಂಗ್ ರಾಣಾ ಅಲಿಯಾಸ್ ಗ್ರೇಟ್ ಖಲಿ ವಿರುದ್ಧ ತೃಣಮೂಲ ಕಾಂಗ್ರೆಸ್ ದೂರು ನೀಡಿದೆ.

ಅಮೆರಿಕ ಪ್ರಜೆಯಾಗಿದ್ದರೂ ಅವರು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಟಿಎಂಸಿ, ಮತದಾರರ ಮೇಲೆ ಪ್ರಭಾವ ಬೀರುವವಿದೇಶಿಗರಿಗೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗವನ್ನು ಕೋರಿದೆ.

ಅಲಿಪೊರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗಲೂ ಹಜ್ರಾ ಜತೆ ಖಲಿ ಇದ್ದರು. ಅವರನ್ನು ನೋಡಲೆಂದು ಅಪಾರ ಪ್ರಮಾಣದ ಜನರು ಸೇರಿದ್ದರು.

ADVERTISEMENT

ಸ್ನೇಹಿತ ಖಲಿ ಉಪಸ್ಥಿತಿಯನ್ನು ಹಜ್ರಾಸಮರ್ಥಿಸಿಕೊಂಡಿದ್ದಾರೆ. ‘ಖಲಿ ಶೇ 100ರಷ್ಟು ಭಾರತೀಯ ಪ್ರಜೆ. ಕೆಲ ಸಮಯ ಅವರು ಅಮೆರಿಕದಲ್ಲಿ ಇದ್ದುದನ್ನೇ ದೊಡ್ಡದು ಮಾಡಲಾಗುತ್ತಿದೆ. ಅವರು ಹರಿಯಾಣದ ಪೊಲೀಸ್ ಇಲಾಖೆಯ ಉದ್ಯೋಗಿ ಕೂಡಾ ಆಗಿದ್ದರು. ಅವರು ಮತದಾರರ ಗುರುತಿನ ಚೀಟಿ ಹೊಂದಿದ್ದು, ದ್ವಿಪೌರತ್ವ ಪಡೆದಿದ್ದಾರೆ’ ಎಂದು ಹಜ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.