ADVERTISEMENT

ಎಎಪಿಗೆ ಅಶೋಕ್‌ ಅಗರ್‌ವಾಲ್‌ ವಿದಾಯ

ಆಯಾರಾಂ ಗಯಾರಾಂ...

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ನವದೆಹಲಿ(ಐಎಎನ್‌ಎಸ್‌): ‘ಆಮ್ ಆದ್ಮಿ’ ಪಕ್ಷದ (ಎಎಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವಕೀಲ ಅಶೋಕ್‌ ಅಗರವಾಲ್‌್ ಪಕ್ಷದಲ್ಲಿನ ಹುದ್ದೆ ಹಾಗೂ ಪಕ್ಷಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಆಮ್‌ ಆದ್ಮಿ  ಖಾಸಗಿ ಕಂಪೆನಿಯ ರೀತಿ ಕಾರ್ಯನಿರ್ವಹಿಸುತ್ತದೆ ಎಂಬ ಕಾರಣ ನೀಡಿ ಅಗರವಾಲ್‌ ಪಕ್ಷ ತ್ಯಜಿಸಿದ್ದಾರೆ.

ಪಕ್ಷದೊಂದಿಗೆ 2012 ರಿಂದ ಗುರುತಿಸಿಕೊಂಡಿದ್ದ ಇವರು, ಸಮಾಜದ ಕೊನೆಯ ಪ್ರಜೆಗೂ ಲಾಭವಾಗಬೇಕು ಎಂಬ ತತ್ವ ಸಿದ್ಧಾಂತಗಳನ್ನು ಮೆಚ್ಚಿಕೊಂಡಿದ್ದರು. ಇತ್ತೀಚೆಗೆ ಪಕ್ಷ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇದು ಜನರಲ್ಲಿ ಅನು ಮಾನ ಹುಟ್ಟಿಸಿದೆ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.