ಪಟ್ನಾ (ಪಿಟಿಐ): ಬಿಹಾರದ ಸಸಾರಾಂ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಅವರಲ್ಲಿ ಐದು ವರ್ಷಗಳ ಹಿಂದೆ ಇದ್ದಷ್ಟೆ ಚಿನ್ನಾಭರಣ ಈಗಲೂ ಇದೆ. ಆದರೆ, ಅವರ ಆಸ್ತಿ ಮೌಲ್ಯ ಮಾತ್ರ ಈಗ ಹೆಚ್ಚಾಗಿದೆ. 2009ರಲ್ಲಿ ಅವರ ಆಸ್ತಿ ₨ 10 ಕೋಟಿ ಇತ್ತು. ಆದರೆ, ಅದು ಈಗ ₨36.49 ಕೋಟಿಗೆ ಏರಿಕೆಯಾಗಿದೆ.
₨3.11 ಲಕ್ಷ ಬೆಲೆಬಾಳುವ ಎರಡು ಚಿನ್ನದ ಬಳೆ, ಒಂದು ಜೋಡಿ ವಜ್ರದ ಟಾಪ್, ಒಂದೊಂದು ಬಂಗಾರ, ಬೆಳ್ಳಿ ಮತ್ತು ನವರತ್ನ ಖಚಿತ ಉಂಗುರಗಳಿವೆ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
ಮೀರಾಕುಮಾರ್ ಅವರು 2013–14ನೇ ಸಾಲಿನಲ್ಲಿ ಸಲ್ಲಿಸಿರುವ ಆದಾಯ ತೆರಿಗೆಯಲ್ಲಿ ₨56.4 ಲಕ್ಷ ವಾರ್ಷಿಕ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪಟ್ನಾ ಮತ್ತು ದೆಹಲಿಯಲ್ಲಿ ₨34.92 ಕೋಟಿ ಮೌಲ್ಯದ ನಿವೇಶನ, ಮನೆ ಮತ್ತು ವಸತಿ ಸಮುಚ್ಚಯ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.