ADVERTISEMENT

ಹಣಕ್ಕಾಗಿ ಟಿಕೆಟ್: ಇಬ್ಬರು ನಾಯಕರಿಗೆ ಎಎಪಿ ಖೊಖ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 11:03 IST
Last Updated 21 ಮಾರ್ಚ್ 2014, 11:03 IST
ಹಣಕ್ಕಾಗಿ ಟಿಕೆಟ್: ಇಬ್ಬರು ನಾಯಕರಿಗೆ ಎಎಪಿ ಖೊಖ್
ಹಣಕ್ಕಾಗಿ ಟಿಕೆಟ್: ಇಬ್ಬರು ನಾಯಕರಿಗೆ ಎಎಪಿ ಖೊಖ್   

ನವದೆಹಲಿ (ಐಎಎನ್ಎಸ್): ಆಮ್ ಆದ್ಮಿ ಪಕ್ಷದ ಟಿಕೆಟ್ ಕೊಡಿಸುವುದಾಗಿ ಹೇಳಿ ಹಣ ಪಡೆದ ಆಪಾದನೆಯಲ್ಲಿ ತನ್ನ ಇಬ್ಬರು ನಾಯಕರನ್ನು ಎಎಪಿ ಶುಕ್ರವಾರ ಉಚ್ಚಾಟಿಸಿದೆ.

ಟಿಕೆಟ್ ಕೊಡಿಸುವುದಾಗಿ ಹೇಳಿ ಭರವಸೆ ನೀಡುವ ಪಕ್ಷದ ಯಾರೇ ಸದಸ್ಯರಿಗೂ ಹಣ ನೀಡಬೇಡಿ ಎಂದು ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಟಿಕೆಟ್ ಆಕಾಂಕ್ಷಿಗಳಿಗೆ ಮನವಿ ಮಾಡಿದರು.

'ಇಬ್ಬರು ಸದಸ್ಯರಾದ ಅರುಣಾ ಸಿಂಗ್ (ಅವಧ್ ವಲಯದ ಸಂಚಾಲಕಿ) ಮತ್ತು ಅಶೋಕ ಕುಮಾರ (ಖಜಾಂಚಿ, ಹರ್ದೋಯಿ)  ಅವರನ್ನು ಪಕ್ಷ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಹಣಕ್ಕಾಗಿ ಪಕ್ಷದ ಟಿಕೆಟ್ ಕೊಡಿಸುವ ವಿಚಾರದಲ್ಲಿ ಅವರು ಷಾಮೀಲಾಗಿದ್ದರೆಂಬುದು ಗೊತ್ತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಕೇಜ್ರಿವಾಲ್ ಪತ್ರಕರ್ತರಿಗೆ ತಿಳಿಸಿದರು.

ಇಂತಹ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಪಕ್ಷಕ್ಕೆ ಮಾಹಿತಿ ನೀಡುವಂತೆ ಮತ್ತು ಇಂತಹ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಕು ಕಾರ್ಯಾಚರಣೆ ಕೈಗೊಳ್ಳುವಂತೆ ಕೇಜ್ರಿವಾಲ್ ಮಾಧ್ಯಮಗಳಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.