ಪೂರ್ಣಿಯಾ (ಪಿಟಿಐ): ‘ಜೆಡಿಯು ಮುಖಂಡರ ದುರಹಂಕಾರ ಮತ್ತು ಪ್ರಧಾನಿಯಾಗಬೇಕೆಂಬ ಮಹದಾಸೆಯಿಂದ ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಬಿತ್ತು’ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಬಿಹಾರಕ್ಕೆ ಹೋಲಿಸಿದರೆ ಗುಜರಾತ್‌ನಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ ಎಂದು ಸಾಚಾರ್ ವರದಿ ಉಲ್ಲೇಖಿಸಿ ಹೇಳಿದ ಅವರು, ಗುಜರಾತ್‌ನಲ್ಲಿ ನೈಜರೂಪದಲ್ಲಿ ಜಾತ್ಯತೀತವಾದ ಆಚರಣೆಯಲ್ಲಿದೆ ಎಂದರು.
ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಕುರಿತು ಮಾತನಾಡಿದ ಅವರು, ‘ಇದೊಂದು ಭ್ರಷ್ಟ್ ಬಂಧನ್’ (ಭ್ರಷ್ಟರ ಮೈತ್ರಿ). ಹಸು ಮತ್ತು ಎಮ್ಮೆಗಳಿಗೂ ಅವುಗಳ ಆಹಾರ ತಿನ್ನಲು ಬಿಡಲಿಲ್ಲ ಎಂದು ಲಾಲು ಪ್ರಸಾದ್ ಅವರ ಮೇವು ಹಗರಣವನ್ನು ಇದೆ ವೇಳೆ ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.