ADVERTISEMENT

ಚಂಡೀಗಢ: ಬಿಜೆಪಿ ಸಂಸದೆ ಪತಿ, ಐಪಿಎಸ್‌ ಅಧಿಕಾರಿ ವರ್ಗಾವಣೆ

ಚುನಾವಣೆ ಕೆಲಸ ವಹಿಸದಂತೆ ಆಯೋಗ ನಿರ್ದೇಶನ

ಪಿಟಿಐ
Published 29 ಮಾರ್ಚ್ 2024, 15:32 IST
Last Updated 29 ಮಾರ್ಚ್ 2024, 15:32 IST
ಚುನಾವಣಾ ಆಯೋಗ  
ಚುನಾವಣಾ ಆಯೋಗ     

ಚಂಡೀಗಢ: ಹರಿಯಾಣದ ಸಿರ್ಸಾದ ಬಿಜೆಪಿ ಸಂಸದೆ ಸುನೀತಾ ದಗ್ಗಲ್‌ ಅವರ ಪತಿ, ಐಪಿಎಸ್‌ ಅಧಿಕಾರಿ ರಾಜೇಶ್‌ ದಗ್ಗಲ್ ಅವರನ್ನು ಚುನಾವಣಾ ಆಯೋಗವು ವರ್ಗಾವಣೆ ಮಾಡಿದೆ. ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಆದೇಶ ಹೊರಡಿಸಿರುವ ಆಯೋಗವು, ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜೇಶ್‌ ಅವರಿಗೆ ಯಾವುದೇ ಚುನಾವಣಾ ಕರ್ತವ್ಯಗಳನ್ನು ವಹಿಸದಂತೆ ಸೂಚಿಸಿದೆ. 

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹರಿಯಾಣ ಸರ್ಕಾರ ಗುರುವಾರ ರಾಜೇಶ್‌ ಅವರನ್ನು ವರ್ಗಾವಣೆ ಆದೇಶ ಹೊರಡಿಸಿದೆ. ಗುರುಗ್ರಾಮದ ಜಂಟಿ ಪೊಲೀಸ್‌ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಂಚಕುಲದ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಉಪ ಪೊಲೀಸ್ ಮಹಾನಿರೀಕ್ಷಕರನ್ನಾಗಿ ನಿಯೋಜಿಸಲಾಗಿದೆ. 

‘ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪ್ರಸ್ತುತ ಲೋಕಸಭೆ ಚುನಾವಣೆ ಮುಗಿಯುವ ತನಕ ರಾಜೇಶ್‌ ದಗ್ಗಲ್‌ ಅವರಿಗೆ ಯಾವುದೇ ಚುನಾವಣಾ ಸಂಬಂಧಿತ ಕೆಲಸವನ್ನು ನಿಯೋಜಿಸುವುದಿಲ್ಲ’ ಎಂದು ಹರಿಯಾಣ ಸರ್ಕಾರ ತಿಳಿಸಿದೆ. 

ADVERTISEMENT

ಹರಿಯಾಣದ 10 ಲೋಕಸಭಾ ಕ್ಷೇತ್ರಗಳಿಗೆ ಏ.25ರಂದು 6ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.