ADVERTISEMENT

ಎಸ್‌ಎಲ್‌ಯು ಇರಿಸಲು ಹೊಸ ನಿಯಮ: ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:32 IST
Last Updated 1 ಮೇ 2024, 15:32 IST
<div class="paragraphs"><p>ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)</p></div>

ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳ ಕ್ರಮಸಂಖ್ಯೆ, ಅವರ ಚಿಹ್ನೆ, ಚಿತ್ರ ಇರುವ ‘ಇಮೇಜ್‌’ಅನ್ನು ವಿವಿ–ಪ್ಯಾಟ್ ಯಂತ್ರಗಳಿಗೆ ಲೋಡ್‌ ಮಾಡಲು ಬಳಸುವ ‘ಸಿಂಬಲ್ ಲೋಡಿಂಗ್ ಯೂನಿಟ್’ಗಳ (ಎಸ್‌ಎಲ್‌ಯು) ನಿರ್ವಹಣೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಕೇಂದ್ರ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಸೂಚನೆ ಅನುಗುಣವಾಗಿ ರೂಪಿಸಿದೆ.

ಎಸ್‌ಎಲ್‌ಯುಗಳನ್ನು ಸೀಲ್ ಮಾಡಿ, ಫಲಿತಾಂಶ ಪ್ರಕಟವಾದ ಕನಿಷ್ಠ 45 ದಿನಗಳವರೆಗೆ ಇವಿಎಂ ಜೊತೆ ಸ್ಟ್ರಾಂಗ್‌ ರೂಂನಲ್ಲಿ ಇರಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ADVERTISEMENT

ಎಸ್‌ಎಲ್‌ಯು ನಿರ್ವಹಣೆಗೆ, ಅವುಗಳನ್ನು ಇರಿಸಿಕೊಳ್ಳಲು ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ಮೂಲಸೌಕರ್ಯವನ್ನು ಸೃಷ್ಟಿಸಿಕೊಡಲು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯೋಗವು ಬುಧವಾರ ತಿಳಿಸಿದೆ.

‘ಸುಪ್ರೀಂ ಕೋರ್ಟ್‌ ಸೂಚನೆಯ ಅನುಸಾರ, ಮೇ 1ರಂದು ಅಥವಾ ಅದರ ನಂತರ ವಿವಿ–ಪ್ಯಾಟ್‌ಗಳಲ್ಲಿ ಸಿಂಬಲ್ ಲೋಡಿಂಗ್ ಪ್ರಕ್ರಿಯೆಯು ಪೂರ್ಣಗೊಳ್ಳುವಲ್ಲಿ ಈ ನಿಯಮಗಳು ಜಾರಿಗೆ ಬರುತ್ತವೆ’ ಎಂದು ಆಯೋಗವು ಹೇಳಿದೆ. ಎಸ್‌ಎಲ್‌ಯುಗಳನ್ನು ಸೀಲ್ ಮಾಡಿ ಇರಿಸಬೇಕು ಎಂದು ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.