
ದಲಿತ ನಾಯಕ, ‘ಭೀಮ್ ಆರ್ಮಿ’ ಸ್ಥಾಪಕ ಚಂದ್ರಶೇಖರ್ ಆಜಾದ್
ಪಿಟಿಐ ಚಿತ್ರ
ಲಖನೌ: ಆಜಾದ್ ಸಮಾಜ್ ಪಕ್ಷದ ನಾಯಕ ಚಂದ್ರಶೇಖರ್ ಆಜಾದ್ ಮತ್ತು ಸಮಾಜವಾದಿ ಪಕ್ಷದ ಮನೋಜ್ ಕುಮಾರ್ ಅವರು ನಗೀನಾ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ದಲಿತ ನಾಯಕ ಚಂದ್ರಶೇಖರ್ ಆಜಾದ್ 2014ರಲ್ಲಿ ‘ಭೀಮ್ ಆರ್ಮಿ’ಯನ್ನು ಸ್ಥಾಪಿಸಿದ್ದರು.
ಇವರ ಜತೆಗೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿಯಾಗಿ ಹರ್‌ಕಿಶೋರ್ ಸಿಂಗ್ ಮೊರಾದಾಬಾದ್ ಕ್ಷೇತ್ರದಿಂದ ಹಾಗೂ ರಾಷ್ಟ್ರೀಯ ಸಮಾಜ ದಳ (ಆರ್) ಅಭ್ಯರ್ಥಿಯಾಗಿ ಸಂಜಯ್ ಕುಮಾರ್ ಭಾರ್ತಿ ಅವರು ರಾಮ್‌ಪುರ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗಾಗಿ ಇದುವರೆಗೆ ಈ ನಾಲ್ವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.