ADVERTISEMENT

ಲೋಸಕಭಾ ಚುನಾವಣೆಯ ಮೂರನೇ ಹಂತ: ಮತದಾನ ಪ್ರಮಾಣ ಶೇ 65.68

ಪಿಟಿಐ
Published 11 ಮೇ 2024, 13:59 IST
Last Updated 11 ಮೇ 2024, 13:59 IST
<div class="paragraphs"><p>ಲೋಸಕಭಾ ಚುನಾವಣೆ</p></div>

ಲೋಸಕಭಾ ಚುನಾವಣೆ

   

ನವದೆಹಲಿ (ಪಿಟಿಐ): ಲೋಸಕಭಾ ಚುನಾವಣೆಯ ಮೂರನೇ ಹಂತದಲ್ಲಿ ಶೇ 65.68 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ಮೂರನೇ ಹಂತದ ಮತದಾನ ಮೇ 7 ರಂದು ನಡೆದಿತ್ತು. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 

ADVERTISEMENT

‘ಮೂರನೇ ಹಂತದಲ್ಲಿ 8.85 ಕೋಟಿ ಪುರುಷರು ಮತ್ತು 8.39 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 17.24 ಕೋಟಿ ಮಂದಿ ಮತ ಚಲಾಯಿಸಲು ಅರ್ಹರಾಗಿದ್ದರು. ಅದರಲ್ಲಿ ಶೇ 66.89 ಪುರುಷರು, ಶೇ 64.4 ಮಹಿಳೆಯರು ಹಾಗೂ ಶೇ 25.2 ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಮಾಡಿದ್ದಾರೆ’ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.