ADVERTISEMENT

ಖರ್ಗೆಗೆ ಬೆಂಬಲ: ಬಿ.ಆರ್‌ ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:35 IST
Last Updated 9 ಮಾರ್ಚ್ 2014, 19:35 IST

ಗುಲ್ಬರ್ಗ: ‘ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಾಮಾಣಿಕ ರಾಜಕಾರಣಿ­ಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅವರನ್ನು ಒಬ್ಬ ಪ್ರಜ್ಞಾವಂತನಾಗಿ, ವೈಯಕ್ತಿಕವಾಗಿ ಬೆಂಬಲಿ­ಸುತ್ತೇನೆ’ ಎಂದು ಶಾಸಕ ಬಿ.ಆರ್‌ ಪಾಟೀಲ ಹೇಳಿದರು.

‘ನಾನು ಯಾವ ಪಕ್ಷ ಸೇರಬೇಕು ಎನ್ನುವ ಬಗ್ಗೆ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುವುದಿಲ್ಲ. ಯಾವುದೇ ಪಕ್ಷದ­ಲ್ಲಿದ್ದರೂ ಗೆಲ್ಲಿಸುತ್ತಾ ಬಂದಿರುವ ಆಳಂದ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.
ಕೆಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ಬಿ.ಆರ್‌ ಪಾಟೀಲ ಅವರು, ಕೆಜೆಪಿಯು ಬಿಜೆಪಿ ಜೊತೆ ವಿಲೀನಗೊಂಡರೂ ತಟಸ್ಥರಾಗಿ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.