ADVERTISEMENT

6 ಕಡೆ ಎಸ್‌ಯುಸಿಐ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಬೆಂಗಳೂರು: ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಕಮ್ಯೂನಿಸ್ಟ್‌) ಪಕ್ಷವು ರಾಜ್ಯದ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಬೆಂಗಳೂರು ದಕ್ಷಿಣದಿಂದ ಎಂ.ಉಮಾದೇವಿ, ಬೆಂಗಳೂರು ಕೇಂದ್ರದಿಂದ ಜಾಹಿರಾ ಶಿರೀನ್‌, ರಾಯಚೂರಿನಿಂದ (ಪರಿಶಿಷ್ಟ ಪಂಗಡ) ಕೆ.ಸೋಮಶೇಖರ, ಧಾರವಾಡದಿಂದ ಗಂಗಾಧರ ಬಡಿಗೇರ, ಗುಲ್ಬರ್ಗದಿಂದ (ಪರಿಶಿಷ್ಟ ಜಾತಿ) ಎಸ್‌.ಎಮ್‌.ಶರ್ಮಾ ಹಾಗೂ ಬಳ್ಳಾರಿಯಿಂದ (ಪರಿಶಿಷ್ಟ ಪಂಗಡ) ಎ.ದೇವದಾಸ್‌ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ದೇಶದಲ್ಲಿ 16 ರಾಜ್ಯಗಳಿಂದ 83 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.