ಮಂಗಳಸೂತ್ರ ಕಸಿಯುವ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ. ಪುಲ್ವಾಮದಲ್ಲಿ ಸೈನಿಕರು ಸತ್ತಾಗ ಅವರ ಪತ್ನಿಯರ ಮಂಗಳಸೂತ್ರ ಕಿತ್ತುಕೊಂಡವರು ಯಾರು? ಪ್ರಧಾನಿ ಮೋದಿ ಪತ್ನಿಯ ಮಂಗಳಸೂತ್ರ ‘ಕಿತ್ತವರು’ ಯಾರು?
ಬಿ.ಕೆ. ಹರಿಪ್ರಸಾದ್, ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ
ಮೋದಿ ಅವರು ಮೂರನೇ ಸಲ ಪ್ರಧಾನಿಯಾದರೆ, ತಮ್ಮ ಕೈಗೆ ಚೊಂಬೇ ಗತಿ ಎಂಬ ಭಯ ಕಾಂಗ್ರೆಸ್‌ನವರಿಗೆ ಕಾಡುತ್ತಿದೆ. ಅವರಿಗೆ ರಾತ್ರಿ ಗಾಢ ನಿದ್ರೆಯಲ್ಲೂ ಚೊಂಬಿನ ಕನಸು ಬೀಳುತ್ತಿದೆ. ಅದಕ್ಕೆ ಚೊಂಬು ಹಿಡಿದೇ ಪತ್ರಿಕಾಗೋಷ್ಠಿ ಮಾಡುತ್ತಾರೆ. ಚುನಾವಣೆ ಬಳಿಕ ಕಾಂಗ್ರೆಸ್‌ನವರು ಚೊಂಬು ಹಿಡಿದು ಹೊರಗೆ ಹೋಗಲಾಗದು. ಮೋದಿ ಅವರು ಎಲ್ಲಾ ಕಡೆ ಶೌಚಾಲಯ ಕಟ್ಟಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ಹಲವು ಬಾರಿ ಮಂತ್ರಿಯಾಗಿದ್ದ ಜಗದೀಶ ಶೆಟ್ಟರ್. ಮುಖ್ಯಮಂತ್ರಿಯೂ ಆಗಿದ್ದರು. ಇಷ್ಟು ದೊಡ್ಡ ಅನುಭವಿ ರಾಜಕಾರಣಿ ‘ಮೋದಿ ನೋಡಿ ಮತ ನೀಡಿ’ ಎಂದು ಕೇಳುತ್ತಿದ್ದಾರೆ. ಇದು ಜನರಿಗೆ ಮಾಡುತ್ತಿರುವ ದ್ರೋಹ. 20 ವರ್ಷಗಳ ಅಧಿಕಾರದಲ್ಲಿ ಹೇಳಿಕೊಳ್ಳುವಂಥದ್ದು ಏನೂ ಮಾಡಿಲ್ಲವೇ? ನಿಮ್ಮ ಸಾಧನೆ ಹೇಳಿ ಮತ ಕೇಳಿ ನೋಡೋಣ.
ಮೃಣಾಲ್ ಹೆಬ್ಬಾಳಕರ, ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.