ADVERTISEMENT

ಗುಂಡ್ಲುಪೇಟೆ: ಮತದಾನ ಬಹಿಷ್ಕಾರ ಮಾಡಿದ ರಾಜ್ಯದ ಕಟ್ಟ ಕಡೆಯ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 10 ಮೇ 2023, 4:22 IST
Last Updated 10 ಮೇ 2023, 4:22 IST
   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ರಾಜ್ಯ ಗಡಿ ಭಾಗದ ಕಟ್ಟಕಡೆಯ ಕಾಡಂಚಿನ ಗ್ರಾಮ ಚಿಕ್ಕೆ ಎಲಚೆಟ್ಟಿ ಗ್ರಾಮಕ್ಕೆ ಹತ್ತಾರು ವರ್ಷಗಳಿಂದ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಗ್ರಾಮದಲ್ಲಿ 101 ಮತದಾರರು ಇದ್ದಾರೆ.

' ಚುನಾವಣಾ ಸಮಯದಲ್ಲಿ ಮಾತ್ರವೇ ಆಶ್ವಾಸನೆ ನೀಡಿ ಹೋಗುತ್ತಿದ್ದಾರೆ ವಿನಾ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಈ ಬಾರಿ ಮತದಾನ ಮಾಡುವುದಿಲ್ಲ' ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ADVERTISEMENT

'ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಸಂಜೆ ಬೆಳಗಿನ ಸಮಯದಲ್ಲಿ ತಿರುಗಾಡಲು ಆಗುತ್ತಿಲ್ಲ, ಮಕ್ಕಳು ಶಾಲೆಗೆ ಹೋಗಿ ಬರಬೇಕಾದರೆ ಸಾರಿಗೆ ಇಲ್ಲದೆ ಪೋಷಕರು ಕರೆದುಕೊಂಡು ಹೋಗಿ ಬರಬೇಕಿದೆ.ಅನೇಕರು ಶಾಲೆಗಳನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕೂಲಿಗೆ ಹೋಗಲು ಆಗುತ್ತಿಲ್ಲ.ಪ್ರತಿ ಚುನಾವಣೆ ಸಮಯದಲ್ಲಿ ಆಶ್ವಾಸನೆ ನೀಡುತ್ತಾರೆ. ಕಳೆದ ಚುನಾವಣೆಯಲ್ಲೂ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೂ ಆಗಿಲ್ಲ' ಎಂಬುದು ಅವರ ದೂರು.

ಮತದಾನದ ಅವಧಿ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದರೂ, ಈವರೆಗೆ ಒಂದು ಮತವೂ ಚಲಾವಣೆ ಆಗಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ‌ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.