ADVERTISEMENT

ಸದಸ್ಯತ್ವಕ್ಕೆ ರಾಜೀನಾಮೆ: ನಿರ್ಧಾರ

ಟಿಕೆಟ್‌ ತಪ್ಪಿಸಿದ ಕ್ರಮಕ್ಕೆ ಆಕ್ರೋಶ ಹೊರಹಾಕಿದ ಇನಾಮದಾರ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 16:42 IST
Last Updated 6 ಏಪ್ರಿಲ್ 2023, 16:42 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನೇಗಿನಹಾಳದಲ್ಲಿ ಗುರುವಾರ, ಕಾಂಗ್ರೆಸ್‌ ಕಾರ್ಯಕರ್ತರು ‘ಖಂಡನಾ ಸಭೆ’ ನಡೆಸಿದರು
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನೇಗಿನಹಾಳದಲ್ಲಿ ಗುರುವಾರ, ಕಾಂಗ್ರೆಸ್‌ ಕಾರ್ಯಕರ್ತರು ‘ಖಂಡನಾ ಸಭೆ’ ನಡೆಸಿದರು   

ಚನ್ನಮ್ಮನ ಕಿತ್ತೂರು: ಇನಾಮದಾರ ಮನೆತನ ಬಿಟ್ಟು ಬಾಬಾಸಾಹೇಬ ಪಾಟೀಲ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಇನಾಮದಾರ ಬೆಂಬಲಿಗರು, ನೇಗಿನಹಾಳದ ಪ್ರೌಢಶಾಲೆ ಎದುರಿನ ವೃತ್ತದಲ್ಲಿ ಗುರುವಾರ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ನೇಗಿನಹಾಳದ ಇನಾಮದಾರ ಮನೆಯಲ್ಲಿ ಮಧ್ಯಾಹ್ನ ಸಭೆ ಸೇರುವ ಮುನ್ನ ವೃತ್ತದಲ್ಲಿ ಜಮಾಯಿಸಿ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನೂ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ನಡೆದ ಸಭೆಯಲ್ಲಿ ಅವರ ಸೊಸೆ ಲಕ್ಷ್ಮಿ ಮಾತನಾಡಿ, ‘ನಾಲ್ಕು ದಶಕದಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ, ನೆಲೆಯೊದಗಿಸಿದ್ದು ಡಿ.ಬಿ. ಇನಾಮದಾರ. ಅವರ ಮನೆತನಕ್ಕೆ ಕಾಂಗ್ರೆಸ್‌ ಮುಖಂಡರು ಅನ್ಯಾಯ ಮಾಡಿದ್ದಾರೆ’ ಎಂದರು.

ADVERTISEMENT

‘ಸದಸ್ಯತ್ವ ಅಭಿಯಾನದಲ್ಲಿ ನಮ್ಮ ಪರವಾಗಿ ಮಾಡಿರುವ ಸದಸ್ಯರೆಲ್ಲರೂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದರು.

‘ಕಿತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೂ ರಾಜೀನಾಮೆ ನೀಡುತ್ತೇನೆ’ ಎಂದು ಅಬ್ದುಲ್ ಮುಲ್ಲಾ ಹೇಳಿದರು.

ಹಬೀಬ್ ಶಿಲೇದಾರ, ರಾಜೇಂದ್ರ ಅಂಕಲಗಿ, ಚಿಂತಣ್ಣ ಮರಡಿ, ದೇವೇಂದ್ರ ಪಾಟೀಲ, ಶಿವನಗೌಡ ಪಾಟೀಲ, ಅರುಣಕುಮಾರ ಬಿಕ್ಕಣ್ಣವರ, ಮುದಕಪ್ಪ ಬಳ್ಗಣ್ಣವರ, ಪ್ರಕಾಶ ಪಾಟೀಲ, ಚಂದ್ರು ಮಾಳಗಿ, ಸಿದ್ರಾಮ ಅಪ್ಪೋಜಿ, ಅಪ್ಪೇಶ ದಳವಾಯಿ,ಪುಂಡಲೀಕ ನೀರಲಕಟ್ಟಿ, ವಿಜಯಕುಮಾರ ಶಿಂದೆ, ಶೇಕಪ್ಪ ಯರಗೊಪ್ಪ, ಸಂಜೀವ ಲೋಕಾಪುರ, ಎಂ. ಎಫ್. ಜಕಾತಿ, ಮಡಿವಾಳಪ್ಪ ಕೋಟಗಿ, ಅಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.