ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
224 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಇಂದು (ಮೇ 10) ಒಂದೇ ಹಂತದಲ್ಲಿ ಮತದಾನ ನಡೆದಿದೆ. ಕೆಲವೆಡೆ ಗೊಂದಲ, ಸಣ್ಣಪುಟ್ಟ ಗಲಾಟೆಗಳಾಗಿರುವುದನ್ನು ಹೊರತುಪಡಿಸಿ ರಾಜ್ಯದಾದ್ಯಂತ ಬಹುತೇಕ ಶಾಂತಿಯುತ ಮತದಾನವಾಗಿದೆ. ಇದೀಗ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ.
ಯಾವುದೇ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು 113 ಸ್ಥಾನ ಗೆಲ್ಲಬೇಕಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದವು. ಮೂರು ಕ್ಷೇತ್ರಗಳಲ್ಲಿ ಇತರರು ಜಯಿಸಿದ್ದರು.
ವಿವಿಧ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ
* ಇಂಡಿಯಾ ಟುಡೇ ಸಮೀಕ್ಷೆ
ಕಾಂಗ್ರೆಸ್: 122–140
ಬಿಜೆಪಿ: 62–80
ಜೆಡಿಎಸ್: 20–25
ಇತರರು: 0–3
* ಟುಡೇಸ್ ಚಾಣಕ್ಯ ಸಮೀಕ್ಷೆ
ಕಾಂಗ್ರೆಸ್: 120
ಬಿಜೆಪಿ: 92
ಜೆಡಿಎಸ್: 12
ಇತರರು: 3
* ಟಿವಿ9 ಕನ್ನಡ, ಸಿ–ವೋಟರ್ ಸಮೀಕ್ಷೆ
ಕಾಂಗ್ರೆಸ್: 100–112
ಬಿಜೆಪಿ: 89–95
ಜೆಡಿಎಸ್: 21–29
ಇತರರು: 2–6
* ಟಿವಿ9 ಭಾರತವರ್ಷ್, ಪೋಲ್‌ಸ್ಟ್ರಾಟ್ ಸಮೀಕ್ಷೆ
ಕಾಂಗ್ರೆಸ್: 99–109
ಬಿಜೆಪಿ: 88–98
ಜೆಡಿಎಸ್: 21–26
ಇತರರು: 0–4 ಸ್ಥಾನ
* ಏಷ್ಯಾನೆಟ್ ಸುವರ್ಣನ್ಯೂಸ್, ಜನ್ ಕೀ ಬಾತ್ ಎಕ್ಸಿಟ್ ಪೋಲ್ ಸಮೀಕ್ಷೆ
ಕಾಂಗ್ರೆಸ್: 91–106
ಬಿಜೆಪಿ: 94–117
ಜೆಡಿಎಸ್: 14–24
ಇತರರು: 0-2
* ಜೀ ನ್ಯೂಸ್ ಮ್ಯಾಟ್ರೈಜ್ ಸಮೀಕ್ಷೆ
ಕಾಂಗ್ರೆಸ್: 103–118
ಬಿಜೆಪಿ: 79–94
ಜೆಡಿಎಸ್: 25–33
ಇತರರು: 2–5
* ಪಿ–ಮಾರ್ಕ್, ರಿಪಬ್ಲಿಕ್ ಸಮೀಕ್ಷೆ
ಕಾಂಗ್ರೆಸ್: 94–108
ಬಿಜೆಪಿ: 85–100
ಜೆಡಿಎಸ್: 24–32
ಇತರರು: 2–6
* ಎಬಿಪಿ, ಸಿ–ವೋಟರ್ ಸಮೀಕ್ಷೆ
ಕಾಂಗ್ರೆಸ್: 99–109
ಬಿಜೆಪಿ: 88–98
ಜೆಡಿಎಸ್: 21-26
ಇತರರು: 0
* ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆ
ಕಾಂಗ್ರೆಸ್: 113
ಬಿಜೆಪಿ: 85
ಜೆಡಿಎಸ್: 23
ಇತರರು: 3
* ನ್ಯೂಸ್ 18 ಸಮೀಕ್ಷೆ
ಕಾಂಗ್ರೆಸ್: 99-109
ಬಿಜೆಪಿ: 88-98
ಜೆಡಿಎಸ್: 21-26
ಇತರರು: 0–4
* ನ್ಯೂಸ್ ನೇಷನ್ – ಸಿಜಿಎಸ್ ಸಮೀಕ್ಷೆ
ಕಾಂಗ್ರೆಸ್: 86
ಬಿಜೆಪಿ: 114
ಜೆಡಿಎಸ್: 21
* ನವ ಭಾರತ್ ಸಮೀಕ್ಷೆ
ಕಾಂಗ್ರೆಸ್: 106–120
ಬಿಜೆಪಿ: 78-92
ಜೆಡಿಎಸ್: 20-26
ಇತರರು: 2–4
* ಇಂಡಿಯಾ ಟಿವಿ–ಸಿಎನ್‌ಎಕ್ಸ್ ಸಮೀಕ್ಷೆ
ಕಾಂಗ್ರೆಸ್: 115
ಬಿಜೆಪಿ: 85
ಜೆಡಿಎಸ್: 22
ಇತರರು: 2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.