
ಪ್ರಜಾವಾಣಿ ವಾರ್ತೆ
ಕಾರವಾರ: ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೂ ಪ್ರಧಾನಿ ಆಗಲಿ ಎಂದು ಅರುಣ ವೆರ್ಣೇಕರ ಎಂಬ ಅಭಿಮಾನಿಯೊಬ್ಬರು ನಗರದ ಸೋನಾರಾವಾಡದಲ್ಲಿನ ತಮ್ಮ ಮನೆಯಲ್ಲಿ ‘ಮೋದಿ ಮಂದಿರ’ ನಿರ್ಮಿಸಿದ್ದಾರೆ.
ಮೋದಿಯವರ ಮೂರ್ತಿ ಜೊತೆಗೆ, ಮನೆಯ ಕೋಣೆಯ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಅಂಟಿಸಿದ್ದಾರೆ.
‘ನಾಲ್ಕು ದಿನದ ಹಿಂದೆ ಮಂದಿರ ನಿರ್ಮಿಸಿದ್ದೇನೆ. ಮೋದಿ ಅವರ ಭಾಷಣ ತಪ್ಪದೇ ಆಲಿಸುತ್ತೇನೆ. ಅವರು ಮತ್ತೆ ಪ್ರಧಾನಿ ಆಗಲೆಂದು ನಿತ್ಯ ಎರಡು ಸಲ ಪೂಜಿಸುತ್ತೇನೆ. ಮೂರ್ತಿ, ಮಂದಿರ ನಿರ್ಮಿಸಲು ₹20 ಸಾವಿರ ವೆಚ್ಚವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.