ADVERTISEMENT

ಕೆಆರ್‌ಎಸ್: 16 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 14:52 IST
Last Updated 20 ಮಾರ್ಚ್ 2024, 14:52 IST
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ   

ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (ಕೆಆರ್‌ಎಸ್‌) ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದು, ಇದುವರೆಗೂ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದೆ.

ಎಸ್.ಕೆ.ಪ್ರಭು (ಶಿವಮೊಗ್ಗ), ರಮೇಶ್ ಚೌಹಾಣ್‌ (ಬೀದರ್), ನಿರುಪಾದಿ ಗೋಮರ್ಸಿ (ಕೊಪ್ಪಳ), ಗಣಪತಿ ಲಾ. ರಾಠೋಡ್ (ವಿಜಯಪುರ), ಬಿ.ವೆಂಕಟೇಶ್ (ಚಿತ್ರದುರ್ಗ), ಕುಂದಳ್ಳಿ ಮಹೇಶ್ (ಚಾಮರಾಜನಗರ), ಮಹೇಶ್ ಎ.ವಿ. (ಕೋಲಾರ), ಪ್ರಕಾಶ್ ಕೆ. (ಬೆಂಗಳೂರು ಕೇಂದ್ರ), ಶಿವಕುಮಾರ್ ಬಿ.(ಬೆಂಗಳೂರು ಉತ್ತರ), ಪ್ರದೀಪ್ ಕುಮಾರ್ ದೊಡ್ಡಮುದ್ದೇಗೌಡ (ತುಮಕೂರು), ಬಿ.ಜಿ.ಕುಂಬಾರ (ಬೆಳಗಾವಿ), ನಾಗರಾಜ್‌ ಕರೆಣ್ಣವರ (ಧಾರವಾಡ), ವಿಜಯ್‌ ಜಾಧವ್‌ (ಕಲಬುರಗಿ), ಕೆ.ಎಚ್‌.ರುದ್ರೇಶ್‌ (ದಾವಣಗೆರೆ), ರಘುಪತಿ ಭಟ್‌ (ಬೆಂಗಳೂರು ದಕ್ಷಿಣ), ಮಾ.ಸ.ಪ್ರವೀಣ್‌ (ಮೈಸೂರು–ಕೊಡಗು) ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

‘ಮೊದಲ ಪಟ್ಟಿಯಲ್ಲಿ 6 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿತ್ತು. 2ನೇ ಹಂತದಲ್ಲಿ 10 ಮಂದಿ ಹೆಸರು ಪ್ರಕಟಿಸಲಾಗಿದೆ. ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲೇ ಹೆಸರು ಘೋಷಿಸಲಾಗುವುದು’ ಎಂದು ಮುಖಂಡರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.