ADVERTISEMENT

ಮೋದಿಯಿಂದ ‌ವೈಯಕ್ತಿಕ ಟೀಕೆ ಸಲ್ಲದು: ಸಿಂಧ್ಯಾ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 6:43 IST
Last Updated 19 ಏಪ್ರಿಲ್ 2019, 6:43 IST
   

ಬಳ್ಳಾರಿ: ‘ಪ್ರಧಾನಿ‌ ನರೇಂದ್ರ ಮೋದಿ ತಮ್ಮ ಸರ್ಕಾರದ ಸಾಧನೆಗಳ ‌ಕುರಿತು ಮಾತನಾಡುವ‌ ಬದಲು, ಕಾಂಗ್ರೆಸ್ ಮುಖಂಡರ‌ ಕುರಿತು ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವುದು ಸರಿಯಲ್ಲ’ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯಾ ಆಗ್ರಹಿಸಿದರು.

ನಗರದಲ್ಲಿ‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ‘ಎಪ್ಪತ್ತು‌ ವರ್ಷಗಳಲ್ಲಿ ದೇಶದಲ್ಲಿ‌ ಹೆಚ್ಚು‌ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಅವುಗಳನ್ನು ಉಲ್ಲೇಖಿಸದೆ, ತಮ್ಮ ಅವಧಿಯಲ್ಲಿ ನಡೆದದ್ದನೇ ದೊಡ್ಡದೆನ್ನುವಂತೆ‌ ಮೋದಿ‌ ಬಿಂಬಿಸುತ್ತಿದ್ದಾರೆ’ ಎಂದು ದೂರಿದರು‌.

‘ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ‌ಮತ್ತು ಈಗಿನ ಮೈತ್ರಿ ಸರ್ಕಾರ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದೆ. ಅದಕ್ಕಾಗಿ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ‌ ಅವರನ್ನು ಆಯ್ಕೆ ಮಾಡಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

ಬಳ್ಳಾರಿ, ಕೊಪ್ಪಳ,‌ ಬೀದರ್ ಮತ್ತು ಕಲ್ಬುರ್ಗಿಯಲ್ಲಿ ಪ್ರಚಾರ ನಡೆಸುವುದಾಗಿ‌ ತಿಳಿಸಿದರು.

ಜೆಡಿಯು‌ ಮತ್ತು‌ ಜೆಡಿಎಸ್ ಅನ್ನು ಒಂದಾಗಿಸುವ‌ ಪ್ರಯತ್ನ ನಡೆಯುವುದೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಪ್ರಯತ್ನ ನಡೆಯಲಿದೆ ಎಂದರು.

ಪಕ್ಷದ ಜಿಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ, ಮುಖಂಡರಾದ ಇಕ್ಬಾಲ್ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.