ADVERTISEMENT

ಲಿಂಬಿಕಾಯಿಗೆ ಟಿಕೆಟ್‌ ಸಾಧ್ಯತೆ ಆಕಾಂಕ್ಷಿಗಳ ತೀವ್ರ ಆಕ್ಷೇಪ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 18:36 IST
Last Updated 1 ಏಪ್ರಿಲ್ 2023, 18:36 IST

ಧಾರವಾಡ: ‘ಹುಬ್ಬಳ್ಳಿ–ಧಾರವಾಡ ಪಶ್ಚಿಮ ಮತಕ್ಷೇತ್ರದಲ್ಲಿ ಈಚೆಗೆ ಪಕ್ಷ ಸೇರಿರುವ ಯಡಿಯೂರಪ್ಪ ಆಪ್ತ, ಮೋಹನ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನೀಡಲು ಮುಂದಾಗಿರುವುದು ಅಕ್ಷಮ್ಯ‘ ಎಂದು ಟಿಕೆಟ್ ಆಕಾಂಕ್ಷಿ ಪಿ.ಎಚ್.ನೀರಲಕೇರಿ ಅವರು ರಾಜ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದವರು, ನಿಷ್ಠಾವಂತ ಕಾರ್ಯಕರ್ತರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಡೆಗಣಿಸುತ್ತಿದ್ದಾರೆ. ಇದನ್ನೇ ಮುಂದುವರೆಸಿದರೇ ಪಕ್ಷದ ನಾಯಕರಿಗೆ ಬುದ್ಧಿ ಕಲಿಸಲಾಗುವುದು’ ಎಂದು ಶನಿವಾರ ನಡೆಸಿದ ಆಕಾಂಕ್ಷಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.

‘ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಹನ್ನೊಂದು ಜನರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಈ ಹನ್ನೊಂದು ಜನರೇ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಒಗ್ಗಟ್ಟಿನ ಹೋರಾಟ ಮಾಡಲಾಗುವುದು’ ಎಂದು ಹೇಳಿದರು. ಆಕಾಂಕ್ಷಿಗಳಾದ ದೀಪಕ ಚಿಂಚೋರೆ, ಡಾ. ಮಯೂರ್ ಮೋರೆ, ಬ್ಲಾಕ್‌ ಕಾಂಗ್ರೆಸ್‌ನ ಬಸವರಾಜ ಕಿತ್ತೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.