ADVERTISEMENT

ಕ್ರೈಸ್ತರಿಗೆ ಟಿಕೆಟ್‌: ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 20:07 IST
Last Updated 18 ಏಪ್ರಿಲ್ 2018, 20:07 IST

ಬೆಂಗಳೂರು: ‘ಕ್ರೈಸ್ತ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದಷ್ಟಾದರೂ ಅವಕಾಶ ನೀಡಬೇಕು. ಇಲ್ಲವಾದರೆ ಶಾಂತಿಪ್ರಿಯರಾದ ಕ್ರೈಸ್ತರು ಹೋರಾಟ ಮಾಡಬೇಕಾಗುತ್ತದೆ’ ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌ ಎಚ್ಚರಿಸಿದೆ.

ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ ಅಧ್ಯಕ್ಷ ಹ್ಯಾರಿ ಡಿಸೋಜ, ‘ರಾಜ್ಯದಲ್ಲಿ ಶೇ 4.5ರಷ್ಟು ಕ್ರೈಸ್ತರಿದ್ದಾರೆ. ಕನಿಷ್ಠ ನಾಲ್ಕು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕು’ ಎಂದರು.

‘ಕಾಂಗ್ರೆಸ್‌ನವರು ಈಗಿರುವ ಇಬ್ಬರು ಶಾಸಕರಿಗೆ ಟಿಕೆಟ್‌ ನೀಡಿದ್ದಾರೆ. ಬೀದರ್‌ ಹಾಗೂ ಮೂಡುಬಿದಿರೆಯಲ್ಲೂ ನಾವು ಟಿಕೆಟ್‌ ಅಕಾಂಕ್ಷಿಗಳಾಗಿದ್ದೆವು. ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಲ್ಲೂ ಮನವಿ ಸಲ್ಲಿಸಿದ್ದೆವು. ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ದೂರಿದರು.

ADVERTISEMENT

‘ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ₹850 ಕೋಟಿ ಮೀಸಲಿಡಬೇಕು. ಈ ಬೇಡಿಕೆ ಈಡೇರಿಸುವವರಿಗೆ ಬೆಂಬಲ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.