ADVERTISEMENT

‘ಟೆಂಡರ್ ವೋಟ್‌’ಗೂ ಅವಕಾಶ

​ಪ್ರಜಾವಾಣಿ ವಾರ್ತೆ
Published 11 ಮೇ 2018, 19:30 IST
Last Updated 11 ಮೇ 2018, 19:30 IST

ಬೆಂಗಳೂರು: ಈ ಚುನಾವಣೆಯಲ್ಲಿ ‘ಟೆಂಡರ್‌ ವೋಟ್‌’ಗೂ ಅವಕಾಶ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

‘ನನ್ನ ಮತವನ್ನು ಬೇರೊಬ್ಬ ವ್ಯಕ್ತಿ ಚಲಾಯಿಸಿದ್ದಾರೆ. ಆದ್ದರಿಂದ, ನನಗೆ ಮತ ಚಲಾಯಿಸಲು ಅವಕಾಶ ನೀಡಬೇಕು’ ಎಂದು ನೈಜ ಮತದಾರ ಮನವಿ ಮಾಡಬಹುದು. ಚುನಾವಣೆ ಆಯೋಗ ಆತನಿಗೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುತ್ತದೆ. ಆದರೆ, ಈ ಮತವನ್ನು ಆಯೋಗ ಸೀಲ್‌ ಮಾಡಿ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳುತ್ತದೆ. ನ್ಯಾಯಾಲಯದ ಸೂಚನೆಯ ಮೇರೆಗೆ ಮಾತ್ರ ತೆರೆಯಲಾಗುತ್ತದೆ. ಇದಕ್ಕೆ ‘ಟೆಂಡರ್‌ ವೋಟಿಂಗ್‌’ ಎಂದು ಕರೆಯಲಾಗುತ್ತದೆ.

ಚಾಲೆಂಜಿಂಗ್‌ಗೂ ಅವಕಾಶ ಇದೆ: ಮತದಾರನ ಚಹರೆ ಗುರುತಿನ ಚೀಟಿಗೆ ಹೋಲಿಕೆ ಆಗದಿದ್ದರೆ, ಮತಗಟ್ಟೆಯ ಬೂತ್‌ ಏಜೆಂಟ್‌ಗಳು ತಕರಾರು ಎತ್ತಬಹುದು. ಆಗ ಚುನಾವಣಾಧಿಕಾರಿ ಅದನ್ನು ಪರಿಶೀಲನೆಗೆ ಒಳಪಡಿಸಬಹುದು ಎಂದೂ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.