ADVERTISEMENT

ಪರ್ಯಾಯ ರಾಜಕಾರಣದ ಪ್ರಯತ್ನ ಮೊಳಕೆಯೊಡೆದಿದೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 14:54 IST
Last Updated 28 ಏಪ್ರಿಲ್ 2018, 14:54 IST
ಪರ್ಯಾಯ ರಾಜಕಾರಣದ ಪ್ರಯತ್ನ ಮೊಳಕೆಯೊಡೆದಿದೆ
ಪರ್ಯಾಯ ರಾಜಕಾರಣದ ಪ್ರಯತ್ನ ಮೊಳಕೆಯೊಡೆದಿದೆ   

ಮಂಗಳೂರು: ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಪೂರಕವಾದಂತಹ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಪ್ರಯತ್ನ ಆರಂಭವಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ತೆಲಂಗಾಣ ರಾಷ್ಟ್ರ ಸಮಿತಿಯ ಕೆ.ಚಂದ್ರಶೇಖರ್ ರಾವ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಜು ಜನತಾದಳ ನಾಯಕಿ ನವೀನ್ ಪಟ್ನಾಯಕ್, ನಟ ಕಮಲಹಾಸನ್ ಸೇರಿದಂತೆ ಹಲವರು ಚರ್ಚೆ ನಡೆಸಿದ್ದೇವೆ' ಎಂದರು.

ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರಬಾರದು. ಮತದಾರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.