ADVERTISEMENT

ಮೋದಿಯಿಂದ ಸೇನೆಯ ಹೆಸರು ದುರ್ಬಳಕೆ: ಆನಂದ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 4 ಮೇ 2018, 10:18 IST
Last Updated 4 ಮೇ 2018, 10:18 IST
ಮೋದಿಯಿಂದ ಸೇನೆಯ ಹೆಸರು ದುರ್ಬಳಕೆ: ಆನಂದ್ ಶರ್ಮಾ
ಮೋದಿಯಿಂದ ಸೇನೆಯ ಹೆಸರು ದುರ್ಬಳಕೆ: ಆನಂದ್ ಶರ್ಮಾ   

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರಾಜಕೀಯಕ್ಕೆ ಸೇನೆಯ ಹೆಸರನ್ನೂ ದುರ್ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ಉಪ ನಾಯಕ ಆನಂದ್ ಶರ್ಮಾ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ' ಕಾಂಗ್ರೆಸ್ ಪಕ್ಷದ ನಾಯಕರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಪ್ರಧಾನಿ ಸೇನೆಯ ಹೆಸರಿನಲ್ಲೂ ಸುಳ್ಳು ಹೇಳುತ್ತಿದ್ದಾರೆ.  ಕರ್ನಾಟಕದಲ್ಲೂ ಇಂತಹ ಸುಳ್ಳುಗಳ ಸರಮಾಲೆಯನ್ನೇ ಹರಿಬಿಡುತ್ತಿದ್ದಾರೆ' ಎಂದರು.

1948ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಜವಾಹರ ಲಾಲ್ ನೆಹರೂ ಮತ್ತು ಕೃಷ್ಣ ಮೆನನ್ ಅವಮಾನಿಸಿದ್ದರು ಎಂದು ಮೋದಿ ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಆಗ ತಿಮ್ಮಯ್ಯ ಸೇನೆಯ ಮುಖ್ಯಸ್ಥರ ಹುದ್ದೆಯಲ್ಲಿ ಇರಲೇ ಇಲ್ಲ ಎಂದು ಹೇಳಿದರು.

ADVERTISEMENT

ದೇಶದಲ್ಲಿ ಈಗ ಎರಡು ಸಂವಿಧಾನ ಮತ್ತು ಎರಡು ಕಾನೂನುಗಳು ಚಾಲ್ತಿಯಲ್ಲಿವೆ. ಮೋದಿ ಬೆಂಬಲಿಗರಿಗೆ ಒಂದು, ವಿರೋಧಿಗಳಿಗೆ ಒಂದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.