ADVERTISEMENT

ಮೈಸೂರಿಗೆ ಮೋದಿ; ಕರಾವಳಿಗೆ ಶಾ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ಮೈಸೂರಿಗೆ ಮೋದಿ; ಕರಾವಳಿಗೆ ಶಾ
ಮೈಸೂರಿಗೆ ಮೋದಿ; ಕರಾವಳಿಗೆ ಶಾ   

ಮೈಸೂರಿಗೆ ಮೋದಿ

ಮೈಸೂರು:  ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 4 ಗಂಟೆಗೆ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದಕ್ಕಾಗಿ 60X40 ವಿಸ್ತೀರ್ಣದ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದೆ.

ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಅನಂತಕುಮಾರ ಹೆಗಡೆ, ಪೀಯೂಷ್‌ ಗೋಯಲ್‌, ಪ್ರಕಾಶ್‌ ಜಾವಡೇಕರ್‌ ಪಾಲ್ಗೊಳ್ಳುವರ.

ADVERTISEMENT

ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಿಂದ ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ.

ರಾಜಕೀಯ ಸಮಾವೇಶಕ್ಕೆ ಮುನ್ನ ನಡೆಯಲಿರುವ ಅಧಿಕೃತ ಕಾರ್ಯಕ್ರಮಗಳಲ್ಲಿಯೂ ಪ್ರಧಾನಿ ಭಾ‌ಗಿಯಾಗಲ್ಲಿದ್ದಾರೆ. ರೈಲ್ವೆ ಯೋಜನೆಗಳಿಗೆ ಚಾಲನೆ, ಕೆಲ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಕೂಡ ಪಾಲ್ಗೊಳ್ಳಲಿದ್ದಾರೆ.

ಯೋಜನೆಗಳು‌:

* ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗಕ್ಕೆ ಚಾಲನೆ

* ಮೈಸೂರು ಹೊರವಲಯದ ನಾಗನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ

* ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಚಾಲನೆ‌

* ಇಎಸ್‌ಐ ಆಸ್ಪತ್ರೆ ಕಟ್ಟಡ ಉದ್ಘಾಟನೆ

* ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ಪಥದ ರಸ್ತೆ ಕಾಮಗಾರಿಗೆ ಚಾಲನೆ

ಇಂದು ಕರಾವಳಿಗೆ ಅಮಿತ್‌ ಶಾ

ಮಂಗಳೂರು:  ಸಂಜೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೂಲಕ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮೂರು ದಿನಗಳ ಪ್ರವಾಸ ಆರಂಭ ಮಾಡಲಿದ್ದಾರೆ.

ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ. ಮಂಗಳವಾರ ಕುಕ್ಕೆ ದೇವರ ದರ್ಶನ ಪಡೆದು, ಕುಲ್ಕುಂದದಲ್ಲಿ ನಡೆಯುವ ಸುಳ್ಯ ವಿಧಾನಸಭಾ ಕ್ಷೇತ್ರದ 8 ಶಕ್ತಿ ಕೇಂದ್ರಗಳಿಂದ 224 ಬೂತಿನ ತಲಾ 9 ‘ನವರತ್ನ’ಗಳನ್ನು ಉದ್ದೇಶಿಸಿ ಮಾತನಾಡುವರು.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಬಿ.ಸಿ.ರೋಡ್‌ನಲ್ಲಿ ಸಮಾವೇಶ ಹಾಗೂ ಸುರತ್ಕಲ್‌ ಸಮೀಪದ ಕಾಟಿಪಳ್ಳದ ದೀಪಕ್‌ ರಾವ್‌ ಮನೆಗೆ ಭೇಟಿ ನೀಡಲಿದ್ದಾರೆ.

ಸಂಜೆ 4 ಗಂಟೆಗೆ ಮಲ್ಪೆಯಲ್ಲಿ ನಡೆಯುವ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಾವೇಶ ಉದ್ಘಾಟನೆ.

21ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಪ್ರಮುಖರೊಂದಿಗೆ ಸಂವಾದ

ಬಳಿಕ ಶಾ ಉತ್ತರ ಕನ್ನಡ ಜಿಲ್ಲೆಗೆ ತೆರಳುವರು. ಹೊನ್ನಾವರದಲ್ಲಿ ಪರೇಶ್‌ ಮೇಸ್ತ ಮನೆಗೆ ತೆರಳುವ ನಿರೀಕ್ಷೆ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.