ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್

ಏಜೆನ್ಸೀಸ್
Published 20 ಡಿಸೆಂಬರ್ 2016, 7:32 IST
Last Updated 20 ಡಿಸೆಂಬರ್ 2016, 7:32 IST
ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್
ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್   

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ನಟಿ ಕರೀನಾ ಕಪೂರ್ ಖಾನ್ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 7.30ಕ್ಕೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕರೀನಾ ಅವರ ಆಪ್ತರು ಹೇಳಿದ್ದಾರೆ.

ಡಿಸೆಂಬರ್ 20, 2016 ರಂದು ನಮಗೆ ಗಂಡು ಮಗು ಜನಿಸಿದೆ ಎಂದು ಸೈಫ್ -ಕರೀನಾ ದಂಪತಿಗಳ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮಗುವಿಗೆ ತೈಮುರ್ ಅಲಿ ಖಾನ್ ಪಟೌಡಿ ಎಂದು ನಾಮಕರಣ ಮಾಡಲಾಗಿದೆ.

ಕರೀನಾ ಅಮ್ಮನಾದ ವಿಷಯವನ್ನು ಕರೀನಾ ಕಪೂರ್ ಅವರ ಅಕ್ಕ ಕರಿಶ್ಮಾ ಕಪೂರ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಬಾಲಿವುಡ್  ಸಿನಿಮಾ ನಿರ್ದೇಶಕ ಕರಣ್ ಜೋಹರ್ ಕೂಡಾ ಟ್ವಿಟರ್‍ ನಲ್ಲಿ ಈ ಸುದ್ದಿಯನ್ನು ಶೇರ್ ಮಾಡಿ ಸೈಫ್ ಕರೀನಾ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.