ADVERTISEMENT

ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 21:24 IST
Last Updated 14 ನವೆಂಬರ್ 2021, 21:24 IST
ಉದ್ಯಮಿ ರಾಜ್‌ ಕುಂದ್ರಾ ಮತ್ತು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ
ಉದ್ಯಮಿ ರಾಜ್‌ ಕುಂದ್ರಾ ಮತ್ತು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ    

ಮುಂಬೈ:ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತುಪತಿ ಉದ್ಯಮಿ ರಾಜ್‌ ಕುಂದ್ರಾ ವಿರುದ್ಧ ₹1.51 ಕೋಟಿ ವಂಚನೆ ಪ್ರಕರಣವನ್ನುಮುಂಬೈ ಮೂಲದ ಉದ್ಯಮಿ ನಿತಿನ್‌ ಬಾರೈ ದಾಖಲಿಸಿದ್ದಾರೆ.ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

‘2014ರ ಜುಲೈನಲ್ಲಿ ಎಸ್‌ಎಲ್‌ಎಫ್‌ ಫಿಟ್‌ನೆಸ್‌ ಕಂಪನಿ ನಿರ್ದೇಶಕ ಕಾಶಿಫ್‌ ಖಾನ್‌, ಶಿಲ್ಪಾ ಶೆಟ್ಟಿ, ರಾಜ್‌ ಕುಂದ್ರಾ ಮತ್ತು ಇತರರು ಉದ್ಯಮವೊಂದರಲ್ಲಿ ₹1.51 ಕೋಟಿ ಹೂಡಿಕೆ ಮಾಡಲು ನನಗೆ ಹೇಳಿದ್ದರು. ಎಸ್‌ಎಫ್‌ಎಲ್‌ ಫಿಟ್‌ನೆಸ್‌ ಕಂಪನಿ ಫ್ರಾಂಚೈಸಿ ನೀಡುತ್ತದೆ. ಅದರಂತೆ ಪುಣೆ ಬಳಿಯ ಹಡಪ್ಸರ್‌ ಮತ್ತು ಕೋರೆಗಾಂವ್‌ನಲ್ಲಿ ಜಿಮ್‌ ತೆರೆಯಬೇಕು ಎಂದು ಹೇಳಿದ್ದರು. ಆದರೆ ಫ್ರಾಂಚೈಸಿ ನೀಡಲಿಲ್ಲ.ಹಣವನ್ನು ವಾಪಸ್ಸು ಕೇಳಿದಾಗ ನನ್ನನ್ನು ಬೆದರಿಸಲಾಯಿತು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿನಿತಿನ್‌ ಹೇಳಿದ್ದಾರೆ.

ಈ ಪ್ರಕರಣ ಕುರಿತು ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಮಾನಹಾನಿ ಮಾಡಲೆಂದೇ ಈ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ಅವರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

ADVERTISEMENT

‘ದಾಖಲೆಗಳು ಸರಿಯಾಗಿ ಇವೆ. ಎಸ್‌ಎಫ್‌ಎಲ್‌ ಫಿಟ್‌ನೆಸ್‌ ಎಂಬ ಸಂಸ್ಥೆಯನ್ನು ನಡೆಸುತ್ತಿರುವುದು ಕಾಶಿಫ್‌ ಖಾನ್‌. ದೇಶದಾದ್ಯಂತ ಜಿಮ್‌ಗಳನ್ನು ತೆರೆಯಲು ಅವರು ಬ್ರ್ಯಾಂಡ್ ಹೆಸರಿನ ಹಕ್ಕನ್ನೂ ಪಡೆದಿದ್ದರು. ಬ್ಯಾಂಕ್‌ ವ್ಯವಹಾರ ಸೇರಿ ಎಲ್ಲಾ ವ್ಯವಹಾರಗಳೂ ಅವರ ಬಳಿಯೇ ಇದ್ದವು.ನಮಗೆ ಕಾಶಿಫ್‌ ಖಾನ್‌ನ ಯಾವ ವ್ಯವಹಾರಗಳೂ ತಿಳಿದಿಲ್ಲ. ನಾವು ಅವರಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ. ಎಲ್ಲಾ ಫ್ರಾಂಚೈಸಿಗಳನ್ನು ಕಾಶಿಫ್ ಅವರೇ ಖುದ್ದಾಗಿ ನಿರ್ವಹಿಸುತ್ತಿದ್ದರು. 2014ರಲ್ಲಿ ಆ ಕಂಪನಿಯನ್ನು ಮುಚ್ಚಲಾಯಿತು’ ಎಂದಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.