‘ಲವ್ ಶೋ’
ಕೆ. ಕಾಶಿ ವಿಶ್ವೇಶ್ವರರಾವ್ ನಿರ್ಮಿಸಿರುವ ‘ಲವ್ ಶೋ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಎ. ಶ್ರೀನಿವಾಸ ರಾವ್ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಧರ್ ಆತ್ರೇಯ ಸಂಗೀತ, ಅನಿಲ್ ಪಲ್ಲಾ ಛಾಯಾಗ್ರಹಣವಿದೆ. ತಾರಾಬಳಗದಲ್ಲಿ ಸಂತೋಷ್‌ಕುಮಾರ್, ಮಂಜುನಾಥ್, ರಾಮರಾವ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ತಬಲನಾಣಿ, ಮಂಡ್ಯ ರಮೇಶ್ ಇತರರು ಇದ್ದಾರೆ.
‘ಸವಾಲ್’
ಪ್ರಜ್ವಲ್ ದೇವರಾಜ್ ನಟನೆಯ ‘ಸವಾಲ್’ ಚಿತ್ರ ಬಿಡುಗಡೆಯಾಗುತ್ತಿದೆ. ಸೋನಾ, ಮುತ್ತುರಾಜ್, ಶೋಭರಾಜ್, ಅಭಯ್, ಮನೋಹರ್, ರಾಜ್ ಕೆ. ಪುರೋಹಿತ್, ರೇಖಾದಾಸ್, ಸಾಧು ಕೋಕಿಲ, ರಾಜು ತಾಳಿಕೋಟೆ, ಅಚ್ಯುತ್ ಕುಮಾರ್, ಟೆನ್ನಿಸ್ ಕೃಷ್ಣ, ಉಮೇಶ್ ಇತರರು ತಾರಾಬಳಗದಲ್ಲಿದ್ದಾರೆ. ಧನಂಜಯ ಬಾಲಾಜಿ ಚಿತ್ರದ ನಿರ್ದೇಶಕರ. ಕೆ. ತಿಮ್ಮರಾಜು ನಿರ್ಮಾಪಕ. ವಿ. ಮನೋಹರ್ ಸಂಗೀತ, ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ‘ಸವಾಲ್’ ಚಿತ್ರಕ್ಕೆ ಇದೆ.
‘ಕರೋಡ್ ಪತಿ’
ಕೋಮಲ್ ನಟನೆಯ, ಎನ್. ಸುರೇಶ್ ನಿರ್ಮಾಣದ ‘ಕರೋಡ್‌ಪತಿ’ ತೆರೆಗೆ ಬರಲಿದೆ. ರಮೇಶ್ ಪಿ.ಸಿ.ಆರ್. ನಿರ್ದೇಶಕರು. ಅಭಿಮಾನ್ ರಾಯ್ ಸಂಗೀತ, ಸೆಲ್ವ ಛಾಯಾಗ್ರಹಣ,
ಕೆ.ಎನ್. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಮೀರಾನಂದನ್, ಜಾಸ್ಮಿನ್, ಮಾಳವಿಕಾ, ಗುರುಪ್ರಸಾದ್, ಬಿರಾದಾರ್, ಡಿಂಗ್ರಿ ನಾಗರಾಜ್ ಇತರರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.